ಸಂವಿಧಾನ ತಿದ್ದುಪಡಿ ಮೂಲಕ ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸಬೇಕು -ಚನ್ನವೀರ ಕಣವಿ

0
307

ಬೆಳಗಾವಿ, 7- ಮಾತೃಭಾಷೆಯಲ್ಲಿ ಶಿಕ್ಷಣ ಕಡ್ಡಾಯಗೊಳಿಸಲು ಸಂವಿಧಾನ ತಿದ್ದುಪಡಿ ಒಂದೇ ಪರಿಹಾರವಾಗಿರುವದರಿಂದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಕೇಂದ್ರ ಸರಕಾರದ ಮೇಲೆ ಈ ವಿಷಯಕ್ಕೆ ಸಂಬಂಧಿಸಿದಂತೆ ಒತ್ತಡ ಹೇರಬೇಕು ಎಂದು ನಾಡೋಜ ಡಾ. ಚನ್ನವೀರ ಕಣವಿ ಹೇಳಿದರು.
ಲಿಂಗೈಕ್ಯ ಡಾ: ಶಿವಬಸವ ಸ್ವಾಮಿಜಿಯವರ 128 ನೇ ಜಯಂತಿ ಮಹೋತ್ಸವ, ಶ್ರೀಮಠದ ಕಿರಿಯ ಶ್ರೀಗಳಾಗಿದ್ದ ಲಿಂಗೈಕ್ಯ ಪ್ರಭು ಸ್ವಾಮಿಜಿ ಅವರ ಪುಣ್ಯಸ್ಮರಣೋತ್ಸವÀ, ಕನ್ನಡ ರಾಜ್ಯೋತ್ಸವ ಮತ್ತು ಡಾ:ಶಿವಬಸವ ಸ್ವಾಮೀಜಿಯವರ ವಿದಾರ್ಥಿ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿ ಅವರು ಗುರುವಾರ ಮಾತನಾಡಿ, ಮಾತೃ ಭಾಷೆಯನ್ನು ಬಿಟ್ಟು ಸಂಸ್ಕøತಿ ಇಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರೊಂದಿಗೆ ಆಯಾ ನಾಡಿನ ಭಾಷೆಯ ಸಂಸ್ಕøತಿಯನ್ನು ಉಳಿಸಿ ಬೆಳೆಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಚಿಂತನೆ ನಡೆಸಬೇಕು ಎಂದರು.
ಕರ್ನಾಟಕದ ಮುಖ್ಯಮಂತ್ರಿಗಳು ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಕನ್ನಡಿಗರು ಭಾಷಾಂಧರಲ್ಲ. ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ ಮುಂದೆಯೂ ಇರುವುದಿಲ್ಲ. ಬಹುಭಾಷಾ ಸಹಿಷ್ಣುಗಳು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು. ಮಧ್ಯದ 10 ಜಿಲ್ಲೆಗಳನ್ನು ಹೊರತು ಪಡಿಸಿದರೇ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳೂ ದ್ವಿಭಾಷಾ ಸಂಸ್ಕøತಿ ಹೊಂದಿವೆ. ಕನ್ನಡ ಉಳಿಸಿ, ಬೆಳೆಸಬೇಕು ಎಂದರು.
ಪ್ರಾ: ಬಿ.ಎಸ್.ಗವಿಮಠ ಅವರಿಗೆ 70 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀಮಠದಿಂದ ಅವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಬಸವ ಸ್ವಾಮೀಜಿಗಳು ಸರ್ವ ಭಾಷೆ ಮತ್ತು ಸರ್ವ ಧರ್ಮದವರನ್ನು ಸಮಾನವಾಗಿ ಕಂಡವರು, ನಾಡಿಗೆ ಮಾದರಿಯಾದವರು. ಅವರೊಂದಿಗೆ ಪ್ರಭು ಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಆರ್ಥಿಕ ಪ್ರಗತಿ ಕಂಡಿತು. ನಂತರ ಸಿದ್ಧರಾಮ ಸ್ವಾಮೀಜಿ ಅವರ ಕಾಲದಲ್ಲಿ ಶ್ರೀಮಠವು ಭೌತಿಕ ಮತ್ತು ವೈಚಾರಿಕ ಪ್ರಗತಿ, ಶೈಕ್ಷಣಿಕ ಕ್ರಾಂತಿ ಕಂಡಿದೆ. 40 ರ ದಶಕದಲ್ಲಿ ಡಾ.ಕರ್ಕಿ ಹಚ್ಚಿದ ಕನ್ನಡದ ದೀಪ ಆರದಂತೆ ಶ್ರೀಮಠ ತನ್ನದೇ ಆದ ಸೇವೆ ಸಲ್ಲಿಸುತ್ತ ಬಂದಿದೆ. ಬೆಳಗಾವಿಯಲ್ಲಿಂದು ಕನ್ನಡಕ್ಕೆ ಭದ್ರವಾದ ನೆಲೆ ಸಿಕ್ಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಆರ್.ಉಳ್ಳಾಗಡ್ಡಿ ಅವರು ಮಾತನಾಡಿ, ನೈತಿಕ ಮತ್ತು ಆರ್ಥಿಕ ಶ್ರೀಮಂತಿಕೆಯ ಸಂಸ್ಕಾರವನ್ನು ಶ್ರೀಮಠವು ನೀಡುತ್ತ ಬಂದಿದೆ ಎಂದರು.
ಹಂದಿಗುಂದ ವಿರಕ್ತಮಠದ ಶ್ರೀಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ನಾಗನೂರ ಮಠವು ಕನ್ನಡಿಗರು ಮತ್ತು ಕನ್ನಡದ ಸೇನಾನಿಗಳಿಗೆ ಲೈಟ್ ಹೌಸದಂತೆ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತ ಬಂದಿದೆ. ಕನ್ನಡಿಗರು ಮನೆಯಿಂದ ಹೊರಬರಲು ಹೆದರುವ ಕಾಲವೊಂದಿತ್ತು. ಈಗ ಕರಾಳ ದಿನ ಆಚರಿಸುವವರು ಮನೆ ಬಿಟ್ಟು ಹೊರಬರಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಶ್ರೀಮಠದ ಕೊಡುಗೆ ಅಪಾರ ಎಂದರು.
ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಶ್ರೀಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜಕ್ಕಾಗಿ, ಕನ್ನಡಕ್ಕಾಗಿ ಕಾರ್ಯ ಮಾಡುವವರನ್ನು ಬೆಳೆಸುವ ಹಾಗು ಗುರುತಿಸುವ ಕಾರ್ಯವನ್ನು ಶ್ರೀಮಠವು ಶಿವಬಸವ ಶ್ರೀಗಳ ಮತ್ತು ಪ್ರಭು ಸ್ವಾಮಿಗಳ ಕಾಲದಿಂದಲೂ ಮಾಡಿಕೊಂಡು ಬರುತ್ತಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಬಿ.ಎ.ರೆಡ್ಡಿ, (ಬೆಳಗಾವಿ), ಡಾ:ಬಸವರಾಜ ಸಬರದ (ಕಲಬುರ್ಗಿ), ಪಂ.ರಾಜಪ್ರಭು ಧೋತ್ರೆ (ಬೆಳಗಾವಿ), ಪಂ.ವಿರೇಶ ಕಿತ್ತೂರ (ಗದಗ) ಅವರುಗಳನ್ನು ಶ್ರೀಮಠದ ಪರವಾಗಿ ಸತ್ಕರಿಸಲಾಯಿತು.
ಎಫ್.ಡಿ.ಮೇಟಿ (ಬಸವನಬಾಗೇವಾಡಿ), ಆರ್.ಎಸ್.ಚಾಪಗಾವಿ (ಬೆಳಗಾವಿ), ಐ.ಆರ್.ಚೌಗಲಾ (ಬೆಳಗಾವಿ), ಎಂ.ಎಫ್.ನಾಯ್ಕರ (ನಾಗನೂರ), ಡಿ.ಎಂ.ಪಾಟೀಲ (ನಾಗನೂರ), ಮತ್ತು ಪಿ.ಎಸ್.ಗದಗ (ನಾಗನೂರ) ಅವರುಗಳಿಗೆ ಪ್ರತಿ ವರ್ಷ ಶ್ರೀಮಠದಿಂದ ಕೊಡಮಾಡುವ ಪ್ರಸಾದ ಶ್ರೀ ಗೌರವ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.
ಡಾ.ಸಿ.ಕೆ.ನಾವಲಗಿ ಅವರ ಚೆಂಬೆಳಕಿನ ಮಹಾಬೆಳಕು ಕೃತಿಯನ್ನು ಡಾ.ಚನ್ನವೀರ ಕಣವಿ ಲೋಕಾರ್ಪಣೆಗೊಳಿಸಿದರು. ಪ್ರೊ. ಸಿ.ಜಿ.ಮಠಪತಿ ಅವರ ಸಾಲು ದೀಪಗಳು ಕೃತಿಯನ್ನು ಅರಭಾವಿ ದುರದುಂಡೇಶ್ವರ ಸಂಸ್ಥಾನಮಠದ ಶ್ರೀಸಿದ್ಧಲಿಂಗ ಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಂ.ರಾಜಪ್ರಭು ಧೋತ್ರೆ, ವಿರೇಶ ಕಿತ್ತೂರ, ಸುನಂದಾ ಗಿರಿಗೌಡರ, ಸೋಮಶೇಖರ ಮರಡಿಮಠ ಮುಂತಾದವರಿಂದ ಸಂಗೀತ ಸೇವೆ ನಡೆಯಿತು.
ವಚನ ಸಂಶೋಧನ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದರ ಹಿನ್ನೆಲೆಯಲ್ಲಿ ಸಂಶೋಧನ ಕೇಂದ್ರಕ್ಕೆ ವಿಶೇಷ ಕಾರ್ಯ ನಿರ್ವಹಿಸಿದ್ದ ಡಾ.ಎಸ್.ಆರ್.ಗುಮಜಾಲ, ಬಿ.ಬಿ.ಹೊಸಮನಿ, ಬಾಳೇಶ ಅಡಿಬಟ್ಟಿ, ಲಕ್ಷ್ಮೀ ಇಂಚಲ ಅವರುಗಳನ್ನು ಸತ್ಕರಿಸಲಾಯಿತು.

LEAVE A REPLY

Please enter your comment!
Please enter your name here