ಮರಾಠಾ ಸಮುದಾಯವನ್ನು ಹಿಂದುಳಿದ 2ಎ ಗುಂಪಿಗೆ ಸೇರಿಸಲು ಕ್ರಮ –ಮುಖ್ಯಮಂತ್ರಿ

0
397

ಮುಂಡಗೋಡ, ಡಿ.7- ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಗುಂಪಿಗೆ ಸೇರ್ಪಡೆ ಮಾಡಲು ಸರ್ಕಾರ ಗಂಭೀರ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರವಾರ ಜಿಲ್ಲೆಯ ಮುಂಡಗೋಡದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಯಲ್ಲಾಪುರ ಮತಕ್ಷೇತ್ರ ವ್ಯಾಪ್ರಿಯ ಮುಂಡಗೋಡ, ಬನವಾಸಿ, ಯಲ್ಲಾಪುರದಲ್ಲಿ ಕೈಗೊಂಡ ವಿವಿಧ ಇಲಾಖೆಯ ಅಂದಾಜು 300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೇರವೇರಿಸಿ ಅವರು ಮಾಡನಾಡಿ, ಮರಾಠಾ ಸಮಾಜದ ಬಹು ದಿನಗಳ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ರಾಷ್ಟ್ರದಲ್ಲೇ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯವನ್ನು ಕಳೆದ ಎರಡೂವರೆ ವರ್ಷಗಳಿಂದ ಮೊದಲ ಸ್ಥಾನಕ್ಕೆ ನಿಲ್ಲಿಸಲಾಗಿದೆ. ನಾವು ಅಧಿಕಾರಕ್ಕೆ ಬರುವಾಗ ಜನತೆಗೆ ನೀಡಿದ 165 ಭರವಸೆಗಳ ಪೈಕಿ ನಾಲ್ಕೂವರೆ ವರ್ಷಗಳಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಭರವಸೆಯ ನೀಡಿದ ಕಾರ್ಯಕ್ರಮಗಳ ಜೊತೆಗೆ ಇತರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಏಕೈಕ ಸರ್ಕಾರ ನಮ್ಮದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಬಿವೃದ್ಧಿಯ ಪರ್ವ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸ ಕೈಗೊಂಡು ಭಟ್ಕಳ ಕ್ಷೇತ್ರದಲ್ಲಿ 1200 ಕೋಟಿ, ಕುಮಟಾ ಕ್ಷೇತ್ರದಲ್ಲಿ 300 ಕೋಟಿ, ಕಾರವಾರ ಕ್ಷೇತ್ರದಲ್ಲಿ 900 ಕೋಟಿ, ಶಿರಸಿ ಕ್ಷೇತ್ರದಲ್ಲಿ 150 ಕೋಟಿ, ಹಳಿಯಾಳ ಕ್ಷೇತ್ರದಲ್ಲಿ 500 ಕೋಟಿ ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ 300 ಕೋಟಿ ಒಳಗೊಂಡಂತೆ ಮೂರುವರೆ ಸಾವಿರ ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಶಂಕು ಸ್ಥಾಪನೆ ನೇರವೇರಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಸರ್ಕಾರ ಮಾಡಿಲ್ಲಾ ಎಂದು ಮುಖ್ಯಮಂತ್ರಿ ಹೇಳಿದರು.
ಅಕ್ರಮ ಸಕ್ರಮ: ಸರ್ಕಾರಿ ಜಮೀನಿನ ಅತಿಕ್ರಮಣಗೊಳಿಸಿದ ಭೂ ರಹಿತರಿಗೆ ಹಕ್ಕು ನೀಡುವ ಕುರಿತಂತೆ ಸರ್ಕಾರ ಶೀಘ್ರವೇ ತೀರ್ಮಾನಿಸಲಿದೆ. ಅರಣ್ಯ ಭೂಮಿ ಒತ್ತುವರಿ ಸಮಸ್ಯೆ ಈ ಭಾಗದಲ್ಲಿ ಹೆಚ್ಚು ಪ್ರಕರಣಗಳಿವೆ ಬಹುದಿನಗಳ ಈ ಸಮಸ್ಯೆಯನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಯಲ್ಲಾಪುರ-ಮುಂಡಗೋಡ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾದ ಬೇಡ್ತಿ ನದಿ ಯೋಜನೆಗೆ ಶೀಘ್ರದಲ್ಲೆ ಶಂಕುಸ್ಥಾಪನೆ ನೇರವೇರಿಸುವುದರ ಮೂಲಕ ಜನತೆ ಕುಡಿಯುವ ನೀರು ಹಾಗೂ ಗದ್ದೆಗಳಿಗೆ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಈ ಭಾಗದ ಜನತೆಯ ಬಹು ದಿನದ ಬೇಡಿಕೆಯಾದ ಬೇಡ್ತಿ ನದಿಯಿಂದ 129 ಕೆರೆಗಳನ್ನು ತುಂಬಿಸುವ ಈ ಯೋಜನೆ ಅನುಷ್ಟಾನಕ್ಕೆ ಸರ್ಕಾರ sಬದ್ದವಾಗಿದೆ. ಈಗಾಗಲೇ ವಿಸ್ತøತ ಯೋಜನೆ ತಯಾರಿಸಿ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ತಾಂತ್ರಿಕ ಅನುಮೋದನೆ ಸಹ ನೀಡಲಾಗಿದೆ. ಶೀಘ್ರವೇ ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೊಜನೆಗೆ ಚಾಲನೆ ನೀಡಲಾಗುವುದು ಎಂದರು.
ಮತ್ತೊಮ್ಮೆ ಆಶೀರ್ವದಿಸಿ: ಯುಲ್ಲಾಪುರ ಮತ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಅವರು ಅಭಿವೃದ್ಧಿ ಪರ ಕ್ರಿಯಾಶೀಲ ಜಾತ್ಯಾತೀತ ಮನೋಭಾವದವರು. ನಿಮ್ಮ ನಿರೀಕ್ಷೆಗಳಂತೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ನೂರಾರು ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಿ ಸಂಧರ್ಭದಲ್ಲೂ ನನ್ನು ಭೇಟಿ ಮಾಡಲು ಬರುವಾಗ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಮಂಜೂರಾತಿಗಾಗಿ ಕೈಯಲ್ಲಿ ಅರ್ಜಿ ಹಿಡಿದು ಬಂದು ಕಾರ್ಯವನ್ನು ಸಾಧಿಸಿ ಹೋಗುವ ಕ್ಷೇತ್ರದ ಅಭಿವೃದ್ಧಿ ಚಿಂತಕರಾದ ಹೆಬ್ಬಾರವರಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಕೋರಿದರು.
ಕೋಮುವಾದಿಗಳನ್ನು ಆರಿಸಬೇಡಿ: ಭಾರತ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಜ್ಯಾತ್ಯಾತೀತ ತತ್ವದ ಬಗ್ಗೆ ನಂಬಿಕೆ ಇಲ್ಲದವರು ಮುಸ್ಲಿಂ, ಕ್ರೈಸ್ತ, ಅಲ್ಪಸಂಖ್ಯಾತ ಧರ್ಮಿಯರನ್ನು ಹೊರಗಿಟ್ಟು ಆಡಳಿತ ನಡೆಸ ಬಯಸುವ ಬಿಜೆಪಿಯವರು ಅಧಿಕಾರ ನಡೆಸಲು ಅನರ್ಹರು. ಸದಾ ಕೋಮುವಾದವನ್ನು ಬಿತ್ತುವ ಅನಂತಕುಮಾರ ಹೆಗಡೆ ಸಚಿವರಾಗಲು ನಾಲಾಯಕ್ ಎಂದು ಟೀಕಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರರವರು ಹಾಗೂ ಬೃಹತ ಕೈಗಾರಿಕಾ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅವರು ಮಾತನಾಡಿ, ನಾಲ್ಕುವರೆ ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು ಎಲ್ಲರಿಗೂ ನೆರವಾಗಿವೆ ಎಂದರು.
ಲೋಕೋಪಯೋಗಿ ಖಾತೆ ಸಚಿವ ಎಚ್.ಸಿ ಮಹದೇವಪ್ಪ, ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಕಾರವಾರ ಕ್ಷೇತ್ರದ ಶಾಸಕ ಸತೀಶ ಶೈಲ್, ಬಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣುಕೆ ಉಪಸ್ಥಿತರಿದ್ದರು.
 

LEAVE A REPLY

Please enter your comment!
Please enter your name here