ಕುಂದರನಾಡ ಅಭಿವೃದ್ಧಿ ವೇದಿಕೆ ಅಸ್ತಿತ್ವಕ್ಕೆ

0
50

ಅಂಕಲಗಿ,.5- ಬೆಳಗಾವಿ ನಗರದಲ್ಲಿ ಕುಂದರನಾಡ ಅಭಿವೃದ್ಧಿ ವೇದಿಕೆ ಭಾನುವಾರ ಅಸ್ತಿತ್ವಕ್ಕೆ ಬಂದಿದೆ. ನಗರದ ಸಂಕಲ್ಪ ಗಾರ್ಡನ್ ನಲ್ಲಿ ಸೇರಿದ ಕುಂದರನಾಡ ನೂರಾರು ರಹವಾಸಿಗಳ ಸಭೆಯಲ್ಲಿ ನಿರ್ಣಯಕ್ಕೆ ಒಮ್ಮತದ ಧ್ವನಿ ಮೂಡಿತು. ಸಂಘಟನೆಯ ಅಧ್ಯಕ್ಷತೆಯನ್ನು ಬೆಳಗಾವಿ ಮಾಜಿ ಮಹಾಪೌರ ಎನ್.ಬಿ.ನಿರ್ವಾಣಿ ಅವರಿಗೆ ವಹಿಸಲಾಯಿತು.

ಕಾರ್ಯದರ್ಶಿಯಾಗಿ ಧನಂಜಯ ಕಾಗತೀಕರ, ಖಜಾಂಚಿಯಾಗಿ ಬಸವರಾಜ ವಾಲಿ, ನಿರ್ದೇಶಕರಾಗಿ ಶಿವಲಿಂಗಪ್ಪಾ ವಾರೀಮನಿ, ರಾಮಣ್ಣಾ ಕುರಪಿ,ವೀರಭದ್ರ ವಕ್ಕುಂದ, ಎಸ್.ಬಿ.ಆಲೂರ,ಬಾಳಪ್ಪಾ ರಾಯಣ್ಣವರ, ಈರಣ್ಣಾ ಕಟ್ಟಾವಿ, ಆನಂದ ಪಾಟೀಲ, ಎನ್.ಬಿ.ಪಾಟೀಲ, ಎಸ್.ಡಿ.ಪಾಟೀಲ, ಎನ್.ಬಿ.ದೊಡಮನಿ, ಬಸನಗೌಡ ಭದ್ರಕಾಳಿ ನೇಮಕಗೊಂಡರು.

ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ, ಎನ್.ಬಿ.ನಿರ್ವಾಣಿ ಮಾತನಾಡಿ, ನಮ್ಮ ಸಂಘಟನೆಯಲ್ಲಿ ಎಲ್ಲರೂ ಸದಸ್ಯತ್ವ ಪಡೆಯಬಹುದಾಗಿದ್ದು, ಸಂಘವು ಸಹಕಾರ, ಪರಸ್ಪರರ ನಡುವಿನ ಪ್ರೀತಿ, ವಿಶ್ವಾಸಗಳ ಪ್ರತೀಕವಾಗಿದೆ. ರಾಜಕೀಯ ಪ್ರೇರಿತವಲ್ಲದ ಸಂಘವು ನಗರದಲ್ಲಿಯ ರಹವಾಸಿಗಳ ಪರಸ್ಪರರ ಸುಖ,ದುಃಖಗಳಲ್ಲಿ ಸರ್ವರೂ ಪಾಲ್ಗೊಳ್ಳುವದು ಸೇರಿದಂತೆ ಪ್ರತಿಯೊಬ್ಬರ ಶಿಸ್ತುಬದ್ಧ ಬದುಕಿಗೆ ಬೆನ್ನು ಕಟ್ಟುವದು ಮತ್ತು ಸರ್ಕಾರದ ಸಾರ್ವಜನಿಕ ಸೌಲಭ್ಯಗಳನ್ನು ಸರ್ವರ ಹಿತಕ್ಕೆ ಒದಗಿಸುವ ಏಕೈಕ ಉದ್ಧೇಶ ಹೊಂದಿದ್ದು ಸಂಘದ ಏಳ್ಗೆಗೆ ಎಲ್ಲರ ಸಹಕಾರ ಅತ್ಯವಶ್ಯವಾಗಿದೆ. ಸದ್ಯದಲ್ಲಿ ಸದಸ್ಯರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡುವದು. ಮತ್ತು ವೇದಿಕೆಗೆ ಕಾನೂನುಬಧ್ಧ ಚೌಕಟ್ಟು ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ. ನಂತರದಲ್ಲಿ ತಮ್ಮೆಲ್ಲರ ಅಭಿಪ್ರಾಯದಂತೆ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲಾಗುವದು. ಎಂದರಲ್ಲದೆ, ಅತಿಯಾದ ಮಳೆಯ ನಡುವೆ ಕರೆದ ಸಭೆಗೆ ಉಪಸ್ತಿತರಿದ್ದ ಸರ್ವರಿಗೂ ಅಭಿನಂದಿಸಿದರು.

 ಉಪಸ್ತಿತರಿದ್ದ .ಕೆ.ಪಾಟೀಲ, ಬಿ.ಕೆ.ಭದ್ರಕಾಳಿ, ಮುರಿಗೇಂದ್ರ ಖನಗಣ್ಣಿ, ಬಸವರಾಜ ವಾಲಿ, ಅಶೋಕ ವಕ್ಕುಂದ, ಅಶೋಕ ಉರಬಿನಹಟ್ಟಿ, ಸುರೇಶ ಮುಳಕೂರಿ, .ಬಿ.ನಿರ್ವಾಣಿ, ಗಿರೀಶ ಪಾಟೀಲ, ಆನಂದ ಪಾಟೀಲ, ರಾಮಣ್ಣಾ ಕುರಪಿ ಬಸವರಾಜ ಮೋದಗಿ, ಶ್ರೀಶೈಲ ಹಿರೇಮಠ ಸೇರಿದಂತೆ ಹಲವಾರು ರಹವಾಸಿಗಳು ಸಂಘದ ಶ್ರೇಯೋಭಿವೃದ್ಧಿ ಕುರಿತು ಮಾತನಾಡಿದರು. ಕುಂದರನಾಡಿನ ಮತ್ತು ರಾಮತೀರ್ಥನಗರದ ಓಂಪ್ರಕಾಶ ನಿರ್ವಾಣಿ, ಜಿ.ಎಸ್.ಪಾಟೀಲ, ಎಸ್.ಸಿ.ಕಮತ, ರಾಜು ಪಾಟೀಲ, ಮಲ್ಹಾರ ದಿಕ್ಷೀತ, ಸಿ.ಎಸ್.ಖನಗಣ್ಣಿ, ಬಾಳಪ್ಪಾ ಹೊನಾಜ, ಅಲ್ಲನ್ನವರ, ಎಮ್,ಬಿ.ಹಿತ್ತಲಮನಿ, ಎಮ್.ಬಿ.ಕೋಮಾರಶೆಟ್ಟಿ, ರಾಚಯ್ಯಾ ಮಠಪತಿ ಸೇರಿದಂತೆ ನೂರಾರು ಬಂಧುಗಳು ಉಪಸ್ತಿತರಿದ್ದರುಪ್ರಶಾಂತ ಪಾಟೀಲ, ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here