ಶಾಲಾ ಸಮಯದಲ್ಲಿ ಹೆಚ್ಚು ಬಸ್ ಬಿಡಲು ಆಗ್ರಹ

0
46

ಅಳ್ನಾವರ,.5- ಇಲ್ಲಿನ ಬಸ್ ನಿಲ್ದಾಣದಿಂದ ಬೆಳಿಗ್ಗೆ ಮತ್ತು ಸಂಜೆ ಸಮೀಪದ ಹಳಿಯಾಳ ಮತ್ತು ಧಾರವಾಡಕ್ಕೆ ಹೋಗಲು ಶಾಲಾ ಸಮಯದಲ್ಲಿ ಹೆಚ್ಚು ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ನೂತನ ತಾಲ್ಲೂಕ ಕೇಂದ್ರವಾದ ಪಟ್ಟಣದಿಂದ ದಿನ ನಿತ್ಯ ವಿದ್ಯಾರ್ಜನೆ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಮೀಪದ ಹಳಿಯಾಳ ಹಾಗೂ ಧಾರವಾಡಕ್ಕೆ ತೆರಳುತ್ತಾರೆ ಆದರೆ ಶಾಲಾ, ಕಾಲೇಜು ಸಮಯಕ್ಕೆ ಹೆಚ್ಚು ಬಸ್ ಇಲ್ಲದೆ ಬಾಗಿಲಿನಲ್ಲಿ ನಿಂತು ಅಪಾಯಕಾರಿ ಪಯಣ ಮಾಡುವ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ,

ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಬಸ್ ಪಾಸ್ ಹೊಂದಿದವರು ಸಂಖ್ಯೆಯನ್ನು ಅವಲೋಕಿಸಿ ಹೆಚ್ಚುವರಿ ಬಸ್ ಬಿಡಲು ಸಾರಿಗೆ ಇಲಾಖೆ ಚಿಂತಿಸಬೇಕು. ಕಳೆದ ವರ್ಷಕ್ಕಿ ಂತ ಬಾರಿ ಬಸ್ ಪಾಸ್ ಹೊಂದಿದವರ ಸಂಖ್ಯೆ ಗಣನೀಯವಾಗಿ ಎರಿಕೆ ಕಂಡಿದೆ ಕಡಿಮೆ ಆದರೆ ಬಸ್ ಕಡಿಮೆ ಆಗಿ ಸಮಸ್ಯೆ ತಲೆದೂರಿದೆ. ಭಾಗದ ಹಲವು ಬಸ್ ಗಳು ಬೆಳಗಿನ ಸಂಚಾರ ರದ್ದು ಮಾಡಲಾಗಿದೆ ಇದರಿಂದ ವಿದ್ಯಾರ್ಥಿ ಸಂಕುಲ ಬಾಗಿಲು ಬಳಿ ನಿಂತು ಪ್ರಯಾಣ ಮಾಡುವ ಸ್ಥಿತಿ ಇದೆ.

ಏನಾದರೂ ಅನಾಹುತ್ ಆಗುವ ಪೂರ್ವದಲ್ಲಿ ಸಾರಿಗೆ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ, ಬಸ್ ತುಂಬ ವಿದ್ಯಾರ್ಥಿಗಳು ತುಂಬಿರುವದರಿಂದ ನಿತ್ಯದ ಪ್ರಯಾಣಿಕರಿಗೂ ತೊಂದರೆ ಆಗಿದೆ.

LEAVE A REPLY

Please enter your comment!
Please enter your name here