ಯಶಸ್ವಿ ಹಂದಿ ಹಿಡಿಯುವ ಕಾರ್ಯಾಚರಣೆ

0
42

ಅಳ್ನಾವರ,.5- ಇಲ್ಲಿನ ಪಟ್ಟಣ ಪಂಚಾಯ್ತಿಯವರು ಶನಿವಾರ ಬೆಳಿಗ್ಗೆ ಪಟ್ಟಣದಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡರು. ಹಂದಿ ಹಿಡಿಯುವ ತಂದದವರು ಪಟ್ಟಣದ ಮೂಲೆ ಮೂಲೆಗಳಲ್ಲಿ ಅಡ್ಡಾಡಿ ಹಮದಿಗಳನ್ನು ಎತ್ತಿ ಲಾರಿಯಲ್ಲಿ ತುಂಬಿದರು.

ತಮಿಳನಾಡಿನ ಹುಸೂರು ಪಟ್ಟಣದ ಹಂದಿ ಹಿಡಿಯುವ ತಂಡ ಪಟ್ಟಣದ ವಿವಿಧ ಬಡಾವಣೆಯಲ್ಲಿ ತಿರುಗಾಡಿ , ಬಿರುಸಿನ ಕಾರ್ಯ ಕೈಗೊಂಡು ಹಂದಿಗಳನ್ನು ಹಿಡಿದು ಲಾರಿಯಲ್ಲಿ ಹಾಕಿದರು. ಹಲವಡೆ ಹಂದಿಗಳ ತಂಡಕ್ಕೆ ತೊಂದರೆ ನೀಡಿದವು. ಹಲವು ಹಂದಿಗಳು ಓಡಿ ಹೋದವು. ಆದರೂ ದೃತಿಗೆಡದೆ ತಂಡದವರು ಬಲೆ ಬೀಸಿ ಚಾಕ ಚಕ್ಕೆತೆಯಿಂದ ಹಂದಿಗಳನ್ನು ಹಿಡಿದರು.

ಈಚೆಗೆ ಪಟ್ಟಣದಲ್ಲಿ ಹಂದಿಗಳ ಹಾವಳಿ ಬಹಳ ಆಗಿತ್ತು. ಕುರಿತು ಸಾರ್ವಜನಿಕರು ಪಟ್ಟಣ ಪಂಚಾಯ್ತಿಗೆ ಸಾಕಷ್ಟು ದೂರು ಸಲ್ಲಿಸಿದ್ದರು. ಸ್ಥಳಿಯ ಆಡಳಿತ ಹಂದಿ ಮಾಲಿಕರಿಗೆ ಹಂದಿ ತೆರವು ಮಾಡಲು ಸಾಕಷ್ಟು ಬಾರಿ ನೀಡಿದ ಘಡವಿನ ಅವಧಿ ಮೀರಿದ ಪ್ರಯುಕ್ತ ಇಂದು ಕಾರ್ಯಾಚರಣೆ ಕೈಗೊಳ್ಳಲಾಯಿತು. ಸುಮಾರ 250 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಗಿದೆ, ಕಳೆದ ವರ್ಷ ಕೂಡಾ ಇದೇ ತಂಡ ಹಂದಿ ಕಾರ್ಯಾಚರಣೆ ನಡೆಸಿತ್ತು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ತಿಳಿಸಿದರು.

ವನಶ್ರೀ ರಸ್ತೆ, ನೆಹರು ನಗರ, ಇಂದಿರಾ ನಗರ ಹಾಗೂ ಹಳೆಯ ಉರಲ್ಲಿ ಸಂಚರಿಸಿ ಹಂದಿ ಹಿಡಿಯಲಾಯಿತು. ಹಲವಡೆ ಹಂದಿಗಳು ಸುಲಭವಾಗಿ ಬಲೆಗೆ ಬೀಳಲಿಲ್ಲ. ಆದರೂ ತಂಡ ಅವುಗಳನ್ನು ಬೆನಟ್ಟಿ ಕಾಯ್ದು ಕುಳಿತು, ಓಡಿ ಹೋಗಿ ಬಲೆ ಬಿಸಿ ಹಿಡಿದು ಲಾರಿಯಲ್ಲಿ ತುಂಬಿದರು. ಕಾರ್ಯಾಚರಣೆಯನ್ನು ಜನರು ಕಾರುತದಿಂದ ವೀಕ್ಷಿಸಿದರು.

ಪಿ ಎಸ್ ಅನಿಲಕುಮಾರ, ಪಟ್ಟಣ ಪಂಚಾಯ್ತಿ ಸದಸ್ಯರಾದ ಛಗನಲಾಲ ಪಟೇಲ, ರಮೇಶ ಕುನ್ನೂರಕರ, ಎನ್.ಬಿ. ನಿಡುವಣಿ, ದೀಪಕ ಕಿತ್ತೂರ, ನಾಗರಾಜ ಗುರ್ಲಹುಸೂರ, ಎಸ್.ಆರ್. ಹಿರೇಹಾಳ, ತೊಪೀಲ ಗಿರಿಯಾಲ ಇದ್ದರು.

LEAVE A REPLY

Please enter your comment!
Please enter your name here