ಫೇಸ್ಬುಕ್ ಗೆಳೆತನ; 7 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

0
41

ಕಾರವಾರ,.5- ತನ್ನಲ್ಲಿರುವ 3 ಮಿಲಿಯನ್ ಅಮೆರಿಕನ್ ಡಾಲರನ್ನು ಭಾರತದಲ್ಲಿ ಹೂಡಿಕೆ ಮಾಡುತ್ತೇನೆ ಎಂದ ಫೆಸ್ಬುಕ್ ಗೆಳತಿಯ ಬಣ್ಣದ ಮಾತಿಗೆ ಮರುಳಾದ ವ್ಯಕ್ತಿಯೊಬ್ಬ 7.69 ಲಕ್ಷ ರೂ. ಪಂಗನಾಮ ಹಾಕಿಕೊಂಡ ಬಗ್ಗೆ ಕಾರವಾರದ ಅಪರಾಧ ಪೊಲೀಸ್ ಠಾಣೆಯಲ್ಲಿ ಭಟ್ಕಳದ ಈಶ್ವರ ಗೊಂಡ ದೂರು ದಾಖಲಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಫೆಸ್ಬುಕ್ ನಲ್ಲಿ ಭಟ್ಕಳದ ಈಶ್ವರ್ ಗೊಂಡ ಅವರಿಗೆ ಗೆಳತಿಯಾಗಿದ್ದ ರೋಸಿನ್ ಸ್ಮಿತ್, ತಾನು ಅಮೆರಿಕ್ ಸೈನ್ಯದಲ್ಲಿ ಕರ್ತವ್ಯದಲ್ಲಿದ್ದು ತನ್ನ ಬಳಿ ಇರುವ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುತ್ತೇನೆ ಎಂದು ಈಶ್ವರ್ ಗೊಂಡ ಅವರಿಗೆ ನಂಬಿಸಿದ್ದಾಳೆ.

ಬಳಿಕ ತನ್ನ ಬಳಿ ಇರುವ ಮೂರು 3 ಮಿಲಿಯನ್ ಅಮೆರಿಕನ್ ಡಾಲರನ್ನು ಕೊರಿಯರ್ ಮೂಲಕ ಕಳುಹಿಸುವುದಾಗಿ ಹೇಳಿದ್ದರಿಂದ ಈಶ್ವರ್ ಗೊಂಡ ಒಪ್ಪಿಕೊಂಡಿದ್ದಾರೆ. ಆದರೆ ರೋಸಿನ್ ಸ್ಮಿತ್ ಅಪಘಾನಿಸ್ಥಾನದಲ್ಲಿದ್ದು ಹಣವನ್ನು ಸ್ಟೀಫನ್ ಜಾನ್ ಎನ್ನುವ ಕೊರಿಯರ್ ಏಜೆಂಟ್ ಮೂಲಕ ಭಾರತಕ್ಕೆ ಕಳುಹಿಸಿದ್ದೇನೆ ಎಂದಿದ್ದಾಳೆ. ಬಳಿಕ ಸ್ಟೀಫನ್ ಸ್ಮಿತ್ ಕ್ಲಿಯರೆನ್ಸ್ ಚಾರ್ಜ್ ಹಾಗೂ ತಮ್ಮ ಸಿಬ್ಬಂದಿಯನ್ನು ಭಾರತಕ್ಕೆ ಕಳುಹಿಸಿಕೊಡುವ ಚಾರ್ಜ್ ನೀಡಬೇಕು ಎಂದು ತಿಳಿಸಿದ್ದಾರೆ. ಬಳಿಕ ಮೂರನೇ ಆರೋಪಿ ಅರ್ಪಿತಾ ಡಿಸೋಜಾ ಎನ್ನುವವಳು ಕಸ್ಟಮ್ ಅಧಿಕಾರಿ ಎಂದು ಹೇಳಿ, ಈಶ್ವರ ಗೊಂಡಗೆ ಕರೆ ಮಾಡಿ, ನಾಲ್ಕನೇ ಆರೋಪಿ ಜಾನ್ ಎನ್ನುವವರಿಗೆ ಎಲ್ಲ ಶುಲ್ಕ ಹಾಕುವಂತೆ ತಿಳಿಸಲಾಗಿದೆ.

ಭಾರತದ ಏರಪೋರ್ಟ್ ಕ್ಲಿಯರೆನ್ಸ್ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿದ್ದರಿಂದ ವಿವಿಧ ರಾಜ್ಯದ ವಿವಿಧ ಬ್ಯಾಂಕಿನ ಖಾತೆಗೆ ಈಶ್ವರ್ ಗೊಂಡ ಅವರು ಒಟ್ಟೂ 7,69,054 ಹಣವನ್ನು ವಿವಿಧ ಖಾತೆಗೆ ಜಮಾ ಮಾಡಿದ್ದರು. ಬಳಿಕ ಯಾವುದೇ ಪಾರ್ಸೆಲ್ ತನಗೆ ತಲುಪಿಸದೆ, ಮೋಸ ಮಾಡಿದ್ದಾರೆ ಎಂದು ಈಶ್ವರ ಗೊಂಡ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here