ಮೂರನೇ ಅಂತಸ್ತಿನಿಂದ ಬಿದ್ದು ಕಾರ್ಮಿಕ ಸಾವು

0
36

ಕಾರವಾರ,.5- ನಗರದ ಕಾಜುಬಾಗದಲ್ಲಿನ ಕಟ್ಟಡ ನಿರ್ಮಾಣ ಹಂತದ ಸಂದರ್ಭದಲ್ಲಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಮೃತಪಟ್ಟ ಘಟನೆ ಸಂಭವಿಸಿದೆ.

ಮೂಲತಃ ಹಳಿಯಾಳದ, ಪ್ರಸ್ತುತ ತಾಲೂಕಿನ ಬಂಗಾರಪ್ಪ ನಗರದಲ್ಲಿ ನೆಲೆಸಿದ್ದ ಖಾದರ್ ಸಾಬ್(34) ಮೃತಪಟ್ಟ ವ್ಯಕ್ತಿ. ಈತ ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ. ಕಾಜುಬಾಗದ ಪೊಲೀಸ್ ವಸತಿ ಗೃಹದ ಕಟ್ಟಡದ ಕಾಮಗಾರಿಯ ವೇಳೆ ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದನು.

ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ. ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here