ಕಾರವಾರ

ಮಳೆಯ ಆರ್ಭಟ ಜೋರು: ಅಲೆಗಳ ಅಬ್ಬರಕ್ಕೆ ಜನ ತತ್ತರ

ಕಾರವಾರ,.5- ಜಿಲ್ಲೆಯಲ್ಲಿ ರವಿವಾರ ಮಳೆರಾಯನ ಆರ್ಭಟ ಜೋರಾಗಿದೆ. ಮಳೆಯ ಜೊತೆಗೆ ಭಾರೀ ಗಾಳಿ ಆತಂಕ ಸೃಷ್ಟಿಸಿದ್ದು ಸಮುದ್ರದ ಅಂಚಿನಲ್ಲಿ ವಾಸಿಸುವವರು ಭೀತಿಯಲ್ಲಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು ತೀರದಂಚಿನ ಜನ ವಸತಿ ಪ್ರದೇಶದಕ್ಕೆ ಸಮುದ್ರದ ನೀರು ನುಗ್ಗಿದೆ.

ಕಾಳಿ ಹಿನ್ನಿರಿನಲ್ಲೂ ಭಾರೀ ಮಳೆಯಾಗುತ್ತಿದ್ದರಿಂದ ಕದ್ರ ಜಲಾಶಯದ ನೀರು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಎಲ್ಲ ಜಲಾವೃತಗೊಂಡಿದೆ. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಎಡಬಿಡದೆ ಮಳೆಯಾಗುತ್ತಿದ್ದರಿಂದ ಕರಾವಳಿ ಹಾಗೂ ಮಳೆನಾಡಿನ ಸಾಕಷ್ಟು ಪ್ರದೇಶಗಳು ಜಲಮಯಗೊಂಡಿದೆ. ಆದರೆ ಕರಾವಳಿಯಲ್ಲಿ ಮಳೆಯ ಜೊತೆಗೆ ಭಾರೀ ಗಾಳಿ ಇದ್ದರಿಂದ ತೂಫಾನ್ ವಾತಾವರಣ ಸೃಷ್ಟಿಗೊಂಡಿದೆ. ಇದರಿಂದಾಗಿ ಕರಾವಳಿಯಲ್ಲಿ ಸಮುದ್ರದ ಅಲೆಗಳು ಆಳೆತ್ತರಕ್ಕೆಳುತ್ತಿದ್ದು ಕಾರವಾರ ತಾಲೂಕಿನ ಪಂಚರಶಿವಾಡಾದ ಸಮುದ್ರದಂಚಿನ ಜನ ವಸತಿ ಪ್ರದೇಶಕ್ಕೆ ಸಮುದ್ರದ ನೀರು ನುಗ್ಗಿದ್ದು ಜನರು ಆತಂಕದಲ್ಲಿದ್ದಾರೆ.

ಅಲ್ಲದೆ ಮಾಜಾಳಿ, ದೇವಭಾಗ, ಕಾರವಾರ, ಹಾರವಾಡಾ, ಅಂಕೋಲಾ ಭಾಗದಲ್ಲಿ ಸಮುದ್ರದ ಅಲೆಗಳು ಭೀತಿ ಸೃಷ್ಟಿಸಿದ್ದು ಕಡಲು ಕೊರೆತ ಹೆಚ್ಚುವ ಸಾಧ್ಯತೆಗಳಿವೆ. ಕಾರವಾರದಲ್ಲಿ ರವಿವಾರ ಸಂತೆಯಾಗಿದ್ದು ವಿವಿಧ ಜಿಲ್ಲೆಯಿಂದ ಬರುವ ತರಕಾರಿ ವ್ಯಾಪಾರಿಗಳು ಮಳೆಯಿಂದಾಗಿ ಭಾರೀ ನಷ್ಟ ಅನುಭವಿಸುವಂತಾಯಿತು.

ಕದ್ರ ಜಲಾಶಯದಿಂದ ನೀಡು ಬಿಡುವ ಸೂಚನೆ: ಜಿಲ್ಲೆಯ ಕಾಳಿ ಹಿನ್ನಿರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹೇರಳ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಜನರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರು ಬಿಡುವುದಾಗಿ ಕದ್ರಾ ಜಲಾಶಯದ ಅಧೀಕ್ಷಕ ಎಂಜಿನಿಯರ್ ಸೂಚನೆ ನೀಡಿದ್ದಾರೆ. ಕಾಳಿ ನದಿಯೋಜನೆ 2ನೇ ಹಂತ ಕದ್ರಾ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿದ್ದರಿಂದ ಬಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ಗಂಟೆಗೆ 38,000 ಕ್ಯುಸೆಕ್ ಒಳಹರಿವಿದ್ದು ಕದ್ರಾ ಜಲಾಶಯದ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ. ಕದ್ರ ಜಲಾಶಯದ ಗರಿಷ್ಠ ಮಟ್ಟವು 34.50 ಇದ್ದು ಪ್ರಸ್ತುತ 33.85 ಮೀಟರ್ಗೆ ನೀರಿನ ಮಟ್ಟ ತಲುಪಿದೆ.

ಇದೇ ರೀತಿಯಲ್ಲಿ ಜಲಾಶಯ ನೀರಿನ ಒಳಹರಿವು ಮುಂದುವರೆದ ಪಕ್ಷದಲ್ಲಿ ಕಡಿಮೆ ಜಲ ಸಂಗ್ರಹಣ ಸಾಮಥ್ರ್ಯ ಹೊಂದಿರುವ ಜಲಾಶಯ ಗರಿಷ್ಠ ಮಟ್ಟ ಶೀಘ್ರದಲ್ಲೇ ತಲುಪಲಿದೆ. ಕಾರಣದಿಂದಾಗಿ ಆಣೆಕಟ್ಟಿನ ಸುರಕ್ಷತೆಗಾಗಿ ಹೆಚ್ಚುವರಿಯಾದ ನೀರನ್ನು ಆಣೆಕಟ್ಟು ತುಂಬಿದ ನಂತರ ಯಾವುದೇ ಸಮುಯದಲ್ಲಿ ಹೊರಬಿಡಲಾಗುವುದು. ಸುರಕ್ಷತೆ ದೃಷ್ಟಿಯಿಂದ ಆಣೆಕಟ್ಟಿನ ಕೆಳದಂಡೆಯಲ್ಲಿ ಹಾಗೂ ನದಿ ದಂಡೆ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳುವುದು ಅಪಾಯಕಾರಿ ಎಂದು ಕದ್ರಾ ಆಣೆಕಟ್ಟಿನ ಕಾರ್ಯ ನಿರ್ವಾಹಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: