ಕನ್ನಡಿಗರಿಗೆ ಬೇಕು ಉದ್ಯೋಗ ಮೀಸಲು

0
31

ದಾವಣಗೆರೆ,.5- ಆಂಧ್ರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಮೀಸಲು ಜಾರಿಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಐಟಿ ಘಟಕದ ರಾಜ್ಯ ಉಪಾಧ್ಯಕ್ಷ ಅರುಣ್ ಜಾವಗಲ್ ಆಶಿಸಿದರು.

ಎಸ್ಸೆಸ್ಸೆಲ್ಸಿಯ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಂಧ್ರಪ್ರದೇಶದಲ್ಲಿ ಉದ್ಯಮ ಹಾಗೂ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಿಡಲು ಅಲ್ಲಿನ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದೆ. ನಮ್ಮಲ್ಲೂ ಇದು ಅನುಷ್ಠಾನವಾಗಬೇಕು ಎಂದರು.

ಉದ್ಯೋಗ ನಿರೀಕ್ಷೆಯಿಂದಲೇ ಕಾರ್ಖಾನೆಗಳಿಗೆ ನಮ್ಮ ಪರಿಸರ, ಭೂಮಿಯನ್ನು ತ್ಯಾಗ ಮಾಡುತ್ತಿದ್ದೇವೆ. ಆದರೆ, ಹೊರ ರಾಜ್ಯದವರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಅರ್ಹತೆ ಮತ್ತು ಪ್ರತಿಭೆ ಇದ್ದರೂ ಕನ್ನಡಿಗರಿಗೆ ಕೆಲಸಗಳು ಸಿಗುತ್ತಿಲ್ಲ. ವಿಚಾರದಲ್ಲಿ ಕನ್ನಡಪರ ಸಂಘಟನೆಗಳ ಜತೆಗೆ ಪಾಲಕರೂ ದನಿಗೂಡಿಸಬೇಕು. ಬಗ್ಗೆ ಪ್ರಶ್ನಿಸದ ಹೊರತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಸರ್ಕಾರ, ಕನ್ನಡಿಗ ಮಕ್ಕಳಿಗೆ ಉದ್ಯೋಗದ ಹಕ್ಕು ಕಲ್ಪಿಸಬೇಕು. ಕೇವಲ ಸಿ ಮತ್ತು ಡಿ ದರ್ಜೆಯಲ್ಲದೆ ಉನ್ನತ ದರ್ಜೆಯ ಹುದ್ದೆಗಳೂ ಸಿಗುವಂತಾಗಬೇಕು. ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಕನ್ನಡಿಗರಿಗೆ ಸಂಕಟದ ದಿನಗಳು ಬರಲಿದೆ ಎಂದು ಎಚ್ಚರಿಸಿದರು.

ನಾರಾಯಣಮೂರ್ತಿಸುಧಾಮೂರ್ತಿ, ಚಂದ್ರಯಾನ ಉಡಾವಣೆ ಮಾಡಿದ ಬಹುತೇಕ ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ. ಹಾಗಾಗಿ ಮಾಧ್ಯಮದ ಬಗ್ಗೆ ಕೀಳರಿಮೆ ಬೇಕಿಲ್ಲ. ಇಂಗ್ಲಿಷ್ ಎಂಬುದು ಇಂದು ಕೌಶಲ ಮಾತ್ರ. ಅದನ್ನು ಕಲಿಯುವುದು ದೊಡ್ಡ ವಿಷಯವಲ್ಲ ಎಂದರು.

ಕನ್ನಡ ಎಂಬುದು ಹೊಟ್ಟೆಗೆ ಅನ್ನ ನೀಡುವ ಭಾಷೆಯಾಗಬೇಕೆಂದು ಎಲ್ಲರೂ ಹೇಳುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ 18 ಸಾವಿರ ಬ್ಯಾಂಕಿಂಗ್ ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದವರು 1 ಸಾವಿರ ಮಂದಿ ಮಾತ್ರ.

ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಖ್ಯ ಪರೀಕ್ಷೆ ಮಾತೃಭಾಷೆಯಲ್ಲಿ ಬರೆಯಲು ಅವಕಾಶವಿದ್ದರೂ ಪ್ರಿಲಿಮ್ಸ್ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಆಯ್ಕೆ ಅನಿವಾರ್ಯ. ತಾರತಮ್ಯದ ಬಗ್ಗೆಯೂ ಗಮನಹರಿಸಬೇಕು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here