ಹಬ್ಬಗಳ ಮೂಲ ಸ್ವರೂಪ ಕಣ್ಮರೆ

0
45

ಹರಪನಹಳ್ಳಿ,.5- ನಾಗರ ಪಂಚಮಿ ಹಬ್ಬದ ಪ್ರಯುಕ್ತ ತಾಲೂಕಿನ ಹಿರೇಮೇಗಳಗೇರಿಯಲ್ಲಿ ಭಾನುವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಶ್ರಾವಣ ಸಂಭ್ರಮ, ತವರಿನ ಉಡುಗೊರೆ ಎಂಬ ವಿನೂತನ ಕಾರ್ಯಕ್ರಮ ಆಚರಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಾತನಾಡಿ, ಆಧುನಿಕ ಯುಗದಲ್ಲಿ ಹಬ್ಬ, ಹರಿದಿನಗಳು ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ. ಸಾಂಪ್ರದಾಯಿಕ ಆಚರಣೆ ಕುರಿತು ಪಟ್ಟಣದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಹಬ್ಬಗಳ ಮೌಲ್ಯ ಉಳಿದುಕೊಂಡಿವೆ ಎಂದರು.

ನಮ್ಮ ಹಿರಿಯರು ಹಾಕಿ ಕೊಟ್ಟ ಹಬ್ಬ, ಆಚರಣೆಗಳು ಮರೆತು ಹೋಗದಿರಲಿ ಎಂಬ ಉದ್ದೇಶದಿಂದ ಮಹಿಳಾ ಕಾಂಗ್ರೆಸ್ನಿಂದ ಹಿರೇಮೇಗಳಗೇರಿಯಲ್ಲಿ ಶ್ರಾವಣ ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಹಿರೇಮೇಗಳಗೇರಿ ಗ್ರಾಮದಲ್ಲಿ 1250 ಮನೆಗಳಿದ್ದು, ಪ್ರತಿ ಮನೆಗೂ ಅರಿಶಿಣ, ಕುಂಕುಮ, ಬಳೆ ಸೇರಿ ಇತರೆ ಸಾಮಗ್ರಿ ನೀಡಲಾಗುತ್ತಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಎಲ್ .ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ದೊಡ್ಡಜ್ಜರ ಹನುಮಂತಪ್ಪ, ಅಂಗಡಿ ಚಂದ್ರಪ್ಪ, ಎಲ್ .ಗಂಗಾಧರಪ್ಪ, ತಾಪಂ ಮಾಜಿ ಸದಸ್ಯೆ ಕಂಚಿಕೆರೆ ಜಯಲಕ್ಷ್ಮೀ, ಕಂಚಿಕೆರೆ ಕೆಂಚಪ್ಪ, ಮತ್ತೂರು ಬಸವರಾಜ, ರವಿ ಯುವ ಶಕ್ತಿ ಪಡೆಯ ಅಧ್ಯಕ್ಷ ಉದಯಶಂಕರ ಇದ್ದರು.

LEAVE A REPLY

Please enter your comment!
Please enter your name here