ಗಂಗಾಮತಸ್ಥ-ಕೋಲಿ ನಿಯೋಗ ಮುಖ್ಯಮಂತ್ರಿಗಳ ಭೇಟಿ

0
41

ವಿಜಯಪುರ,ಆ.5- ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ಗಂಗಾಮತಸ್ಥ ಸಮಾಜದ ನಿಯೋಗವು ಕರ್ನಾಟಕ ರಾಜ್ಯ ಗಂಗಾಮತಸ್ಥ ರಾಜ್ಯ ಅಧ್ಯಕ್ಷರಾದ ಶ್ರೀ ಮೌಲಾಲಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಆಗಿ ಅಭಿನಂದನೆ ಸಲ್ಲಿಸಿದರು.

ಬೆಂಗಳೂರು ವಿಧಾನಸೌಧದಲ್ಲಿನ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷರಾದ ಮೌಲಾಲಿ ಅವರ ನೇತೃತ್ವದಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಜದ ಇಬ್ಬರು ಶಾಸಕರಾದ ರವಿಕುಮಾರ ಹಾಗೂ ಲಾಲಾಜಿ ಮೆಂಡನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವನ್ನಾಗಿ ಮಾಡಬೇಕು ಹಾಗೂ ಕೋಲಿ ಗಂಗಾಮತಸ್ಥರ 39ಪರ್ಯಾಯ ಪದಗಳಿಂದ ಗುರುತಿಸಲ್ಪಡುವ ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಲು ರಾಜ್ಯ ಸಂಘದ ವತಿಯಿಮದ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷರಾದ ನಾಗರಾಜ ಮಣ್ಣೂರ, ರಾಜ್ಯ ಗಂಗಾಮತಸ್ಥರ ನೌಕರರ ಕಾರ್ಯಾಧ್ಯಕ್ಷರಾದ ಶಿವರುದ್ರಪ್ಪ ತಳವಾರ, ಸಂಜೀವ ಕೋಕಾರ, ಸಿದ್ದು ರಮಗ, ಬಸವರಾಜ ಕೋಳಿ, ನಾಗಪ್ಪ ಅಂಬಿ, ಚಂದ್ರಶೇಖರ ಚಿಕ್ಕಲಕಿ ರಾಜ್ಯ ಗಂಗಾಮತಸ್ಥರ ನೌಕರರ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷ ಎಸ್.ಕೆ.ಬಿದನೂರ, ಸೇರಿದಂತೆ ಅವತಿ ಗೋಪಾಲ, ಕಾರ್ಯದರ್ಶಿ ಮುರುಳಿಧರ, ಸಂಘಟನಾ ಕಾರ್ಯದರ್ಶಿಗಳಾದ ಕುಮಾರ್, ಗವಿರಾಜ್ ಹಾಗೂ ಯಾದಗಿರಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಲಲಿತಾ ಆನ್‍ಪು ಹಾಗೂ ಮಹೇಶ ಅನ್‍ಪುರ, ಎಸ್.ವಾಯ್. ಹಾದಿಮನಿ, ಧಾರವಾಡದ ಮಹದೇವ ಹೆಗ್ಗಣ್ಣವರ, ಸೂರ್ಯಪ್ರಕಾಶ ಕೋಲಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಮಂತ್ರೋಡಿ, ಉಪಾಧ್ಯಕ್ಷರಾದ ದತ್ತಾತ್ರೇಯ ಶಿರ್ಶಿಕರ್, ವಿಜಯಲಕ್ಷ್ಮಿ ಮುಕ್ಕ, ಮಂಡ್ಯ ಜಿಲ್ಲೆ ಗಂಗಾಮತಸ್ಥ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ, ರಾಜ್ಯ ಸಂಘದ ಕೀರ್ತಿ ಕುಮಾರ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಸಮಾಜ ಬಾಂಧವರು ನೂತನವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪುಷ್ಪಗುಚ್ಚ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here