ಸಸಿ ನೆಡುವ ಕಾರ್ಯಕ್ರಮ

0
55

ವಿಜಯಪುರ,ಆ.5- ವಿಜಯಪುರ ನಗರದ ಕಿತ್ತೂರರಾಣಿ ಚನ್ನಮ್ಮ ನಗರದಲ್ಲಿ ಭಾರತ ಯುವ ವೇದಿಕೆ ಚಾರಿಟೆಬಲ್ ಫೌಂಡೇಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುನೀಲ ಜೈನಾಪುರ ಮಾತನಾಡಿ, ಇಂದು ನಮ್ಮ ವೇದಿಕೆ ವತಿಯಿಂದ 50ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ನಮ್ಮ ಎಲ್ಲಾ ಸದಸ್ಯರು ಒಬ್ಬೊಬ್ಬರಂತೆ ದತ್ತಕ್ಕೆ ತೆಗೆದುಕೊಂಡು 3 ವರ್ಷ ಪೋಷಿಸುವಂತೆ ಎಂದು ಹೇಳಿದರು.

ವಿಜಯಪುರ ಬರಗಾಲದ ಜಿಲ್ಲೆಯಾಗಿದೆ ಇದನ್ನು ಹಸಿರು ನಂದನವನವನ್ನಾಗಿಸಲು ನಮ್ಮ ವೇದಿಕೆ ಶ್ರಮಿಸುತ್ತಿದೆ ಎಂದು ಹೇಳಿದರು. ಆಗ ಅದೇ ರೀತಿಯಾಗಿ ಈ ಕಾರ್ಯಕ್ರಮದಲ್ಲಿ ವೇದಿಕೆಯ ಹಿರಿಯ ಸದಸ್ಯರಾದ ಶಿವಾನಂದ ಮಾಳಗೊಂಡ (ಮುಳವಾಡ) ಮಾತನಾಡಿ, ವಿಜಯಪುರ ಆರೋಗ್ಯದ ದೃಷ್ಟಿಯಲ್ಲಿ ಕ್ಷಯರೋಗದಲ್ಲಿ ಮೊದಲನೇ ಸ್ಥಾನದಲ್ಲಿದೆ. ಹೀಗಾಗಿ ನಾವು ಎಲ್ಲಾ ರೋಗದಿಂದ ಮುಕ್ತರಾಗಲು ಪರಿಸರ ಉಳಿಸಿ ಪರಿಸರ ಬೆಳೆಸುವುದನ್ನು ನಮ್ಮ ಕರ್ತವ್ಯವಾಗಿದೆ. ನಮ್ಮ ವೇದಿಕೆಯ ಎಲ್ಲಾ ಸದಸ್ಯರು ಇನ್ನುಮುಂದೆ 1 ಲಕ್ಷ ಗಿಡಗಳನ್ನು ನೆಡಬೇಕೆಂದು ನಿರ್ಧರಿಸಿದ್ದೇವೆ. ಪರಿಸರ ಇಂದು ಉಳಿಸಿದರೆ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕುತ್ತದೆ ಎಂದು ಸ್ಮರಿಸಿದರು.

LEAVE A REPLY

Please enter your comment!
Please enter your name here