ಸಾಹಿತಿ ಮುರುಗೇಶ ಸಂಗಮರಿಗೆ ಸನ್ಮಾನ          

0
52

ವಿಜಯಪುರ,ಆ.5- ಸಾಹಿತಿ ಮುರುಗೇಶ ಸಂಗಮರವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಅಮೋಘವಾದದ್ದು, ಅವರ 30 ವರ್ಷಗಳ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ ಇಂಟರ್ ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ (ಗ್ಲೋಬಲ್) ಯ ಬೆಂಗಳೂರು ಪ್ರಾದೇಶಿಕ ಶಾಖೆ ನೀಡುವ ಗೌವರ ಡಾಕ್ಟರೇಟ್ ಪದವಿಗೆ ಭಾಜನರಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಸಾಹಿತಿ, ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.

ಮುರುಗೇಶ ಸಂಗಮ ಅವರಿಗೆ ಗೌರವ ಡಾಕ್ಟರೇಟ್ ಪ್ರಾಪ್ತವಾದ ಪ್ರಯುಕ್ತ ಇಲ್ಲಿನ ರೇಣುಕಾ ನಗರದ ಜ್ಞಾನಗಂಗೋತ್ರಿ ಶಾಲೆಯಲ್ಲಿ ‘ಸ್ನೇಹ ಬಳಗ’ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವದ ಮುರುಗೇಶ ಸಂಗಮ ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಅಲ್ಲದೆ ಅವರಿಗೆ ಇನ್ನು ಉನ್ನತ ಪ್ರಶಸ್ತಿ, ಪರುಸ್ಕಾರಗಳು ದೊರೆಯಲಿ ಎಂದು ಹೇಳಿದರು.

LEAVE A REPLY

Please enter your comment!
Please enter your name here