ವಿಜಯಪುರ

ಸಿಕ್ಯಾಬ ವಿದ್ಯಾರ್ಥಿಗಳ ಹ್ಯಾಟ್ರಿಕ್ ಸಾಧನೆ

ವಿಜಯಪುರ,ಆ.5- ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ವಿಷಯಾಧಾರಿತ ಪ್ರೋಜೆಕ್ಟಗಳಿಗೆ ಸತತ ಮೂರನೇ ಬಾರಿಗೆ ಪ್ರಶಸ್ತಿ ಲಭಿಸಿದ್ದು ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ವಿದ್ಯಾ ಮಂಡಳಿ ಹಮ್ಮಿಕೊಂಡ ವಿಷಯಾಧಾರಿತ ಪ್ರೋಜೆಕ್ಟಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಿಕ್ಯಾಬ ಕಾಲೇಜಿನ ವಿದ್ಯಾರ್ಥಿಗಳೆ ಪ್ರಥಮ ಸ್ಥಾನ ಗಳಿಸುತ್ತ ಹ್ಯಾಟ್ರೀಕ್ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ವಿದ್ಯಾ ಮಂಡಳಿಯಿಂದ ಪ್ರಶಂಸಾ ಪತ್ರ ಪಡೆಯುವುದರೊಂದಿಗೆ ಪ್ರೋಜೆಕ್ಟನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಕ್ರಮ ಕೈ ಕೊಳ್ಳಲು ಧನಸಹಾಯ ಮಾಡಿದೆ.

ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಡಾ. ಎಂ ಎಸ್ ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ಆಯೋಜಿಸಿದ್ದ 42 ನೇ ಸರಣಿ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದಲ್ಲಿ ಸಿಕ್ಯಾಬ ಕಾಲೇಜಿನ ವಿದ್ಯಾರ್ಥಿಗಳು ಪ್ರೋಜೆಕ್ಟ ಪ್ರದರ್ಶನ ಮಾಡಿದ್ದರು. ಈ ಪ್ರೋಜೆಕ್ಟಗಳನ್ನೇ ಉತ್ತಮ ಪ್ರದರ್ಶನ ಮಾಡಿದ್ದಾರೆ ಎಂದು ಕೀರ್ತಿಗೆ ಪಾತ್ರರಾಗಿದ್ದಾರೆ.

ಸಿಕ್ಯಾಬ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ “ಎಸ್ಟಿಮೇಷನ್ ಆಫ ಎಗ್ಜಾಸ್ಟ್ ಎಮಿಷನ್ ಪ್ಯಾರಾಮಿಟರ್ ಆಫ್ ಫೋರಸ್ಟ್ರೋಕ ಡಿಸೆಲ್ ಇಂಜಿನ್ ಯುಜಿಂಗ್ ವೇಸ್ಟ ಕುಕ್ಕಿಂಗ ಆಯಿಲ್” ಪ್ರೋಜೆಕ್ಟ್ ಗೆ ಪ್ರಶಸ್ತಿ ಲಭಿಸಿದೆ.

ಈ ಪ್ರದರ್ಶನದಲ್ಲಿ ಸಿಕ್ಯಾಬ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ತೌಶೀಫ ಸತ್ತಾರೆಕರ, ಮೊಹಮ್ಮದಹನೀಪ ಯಂಡಿಗೇರಿ, ಮೊಹಮ್ಮದಸೋಯೆಬ್, ಉಮರಫಾರುಕ್ ಬಾಗವಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಾ. ಸಯ್ಯದ ಅಬ್ಬಾಸಲಿ, ಪ್ರೋ. ಆಶೀಪ ಇಕ್ಬಾಲ ದೊಡಮನಿ, ಇವರ ಮಾರ್ಗದರ್ಶನದಲ್ಲಿ ಪ್ರೋಜೆಕ್ಟ ಕಾರ್ಯ ನಡೆಯಿತು. ಇದರಿಂದ ರಾಜ್ಯದಲ್ಲಿ ಸಿಕ್ಯಾಬ ಮೆಕ್ಯಾನಿಕಲ್ ಇಂಜಿನಿಯರಿಂಗ ಕಾಲೇಜಿನ ಕೀರ್ತಿ ಹೆಚ್ಚಿದಂತಾಗಿದೆ. ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಸ್ ಎ ಪುಣೇಕರ, ಪ್ರಧಾನ ಕಾರ್ಯದರ್ಶಿ ಎ ಎಸ್ ಪಾಟೀಲ, ನಿರ್ದೇಶಕರಾದ ಸಲಾವುದ್ದೀನ ಪುಣೇಕರ, ಪ್ರಾಚಾರ್ಯ ಡಾ. ಎಸ್ ಜೆ ಅರವೇಕರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಅಭಿನಂಧಿಸಿದ್ದಾರೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: