ವ್ಹಿ.ಪಿ. ನಾಯಕ ದಂಪತಿಗಳಿಗೆ ಸನ್ಮಾನ

0
39

ವಿಜಯಪುರ,ಆ.5- ಸಹಕಾರಿ ರಂಗದಲ್ಲಿ ಕಳೆದ 34 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಆದರ್ಶ ವ್ಯಕ್ತಿ ವ್ಹಿ.ಪಿ.ನಾಯಕ ಅವರನ್ನು ಸನ್ಮಾನಿಸಲು ಹೆಮ್ಮೆಏನಿಸುತ್ತದೆ ” ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಹಾಗು ತಿಕೋಟಾ ಪಿ.ಕೆ.ಪಿ.ಎಸ್ ಅಧ್ಯಕ್ಷ ಟಿ.ಕೆ.ಹಂಗರಗಿ ಹೇಳಿದರು.

ಅವರು ತಿಕೋಟಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಸಹಾಯಕ ನಿರ್ದೇಶಕರು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಂಡಿ ಉಪ ವಿಭಾಗದಲ್ಲಿ ಅಂತಿಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಯುಕ್ತ ವ್ಹಿ.ಪಿ.ನಾಯಕ ಹಾಗೂ ಅವರ ಧರ್ಮಪತ್ನಿ ವಂದನಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷೆ ಬಾಗೀರಥಿ. ಚಂ.ತೇಲಿ ಮಾಜಿ ಉಪಾಧ್ಯಕ್ಷ ಬಾಬುಗೌಡ. ಎಂ. ಪಾಟೀಲ ನಿರ್ದೇಶಕ ರಾಮರಾವ. ದೇಸಾಯಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here