ಸಮೀಕ್ಷೆಗಳು ಫಲಕಾರಿಯಾಗಲು ಸಂದರ್ಶಕರ ತಾಳ್ಮೆ ಮುಖ್ಯ

0
45

ಧಾರವಾಡ,ಆ.5- ಜಾಗತಿಕ ಆರೋಗ್ಯ ಸಮೀಕ್ಷೆಗಳು ಫಲಕಾರಿಯಾಗಲು ಹಾಗೂ ಅವುಗಳು ನೀಡುವ ಫಲಿತಾಂಶಗಳು ನಿಖರವಾಗಿರಲು ಸಂದರ್ಶಕರ ತಾಳ್ಮೆ ಬಹಳ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮಾದಿನಕರ ಅಭಿಪ್ರಾಯಪಟ್ಟರು.

ನಗರದ ಜನತಾ ಶಿಕ್ಷಣ ಸಮಿತಿಯ ಆರ್ಥಿಕ ಸಂಶೋಧನಾ ಸಂಸ್ಥೆ ಮತ್ತು ಜನಸಂಖ್ಯಾ ಸಂಶೋಧನಾ ಕೇಂದ್ರದಲ್ಲಿ ಡಬ್ಲುಎಚ್‍ಓ-ಎಸ್‍ಎಜಿಎ ಸಮೀಕ್ಷೆಯಡಿ ಆಯೋಜಿಸಿದ್ದ À ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಸಂದರ್ಶಿಸುವರ ಮನೋಭಾವನೆಯನ್ನು ಅರ್ಥಮಾಡಿಕೊಂಡು ಕುಲಂಕೂಷವಾಗಿ ಮಾಹಿತಿ ಸಂಗ್ರಹಣೆ ಮಾಡಬೇಕು ಎಂದರು.

ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಮಾತನಾಡಿ, ಇಂತಹ ಸಮೀಕ್ಷೆಗಳಲ್ಲಿ ಹಲವಾರು ರೀತಿಯ ಅಡಚಣೆಗಳು ಬರುತ್ತವೆ.ಅವುಗಳನ್ನು ಸಮರ್ಥವಾಗಿ ಎದುರಿಸಿ ನಿಖರ ಮಾಹಿತಿ ಕಲೆ ಹಾಕಬೇಕು. ಹಾಗೂ ಇದನ್ನೂ ಒಂದು ರೀತಿಯ ಸಮಾಜ ಸೇವೆಯೆಂದು ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಡಾ.ಜ್ಯೋತಿ ಹಳ್ಳದ ಸ್ವಾಗತಿಸಿದರು. ರಾಗಿಣಿ ಇಟಗಿ ನಿರೂಪಿಸಿದರು.ಡಾ.ಶ್ರೀಪ್ರಸಾದ ವಂದಿಸಿದರು.

LEAVE A REPLY

Please enter your comment!
Please enter your name here