ರಸ್ತೆಗಳ ಸುಧಾರಣೆಗೆ ರೈತರ ಆಗ್ರಹ

0
40

ಧಾರವಾಡ,ಆ.5- ಕುಂದಗೋಳ ತಾಲೂಕು ರೈತ ಬೆಳಗಾರರ ಸಂಘದವರು ತಾಲೂಕ ರೈತರ ಜಮೀನುಗಳ ಹಾಗೂ ವಿವಿಧ ರಸ್ತೆಗಳ ಸುಧಾರಣೆ ಮಾಡಬೇಕೆಂದು ಶಾಸಕಿ ಕುಸುಮಾವತಿ ಶಿವಳ್ಳಿಯವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಶಾಸಕಿ ಕುಸುಮಾವತಿ ಶಿವಳ್ಳಿಯವರು ಮಾತನಾಡುತ್ತಾ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಚರ್ಚಿಸಿ ನಂತರ ತಮ್ಮ ಬೇಡಿಕೆಗಳನ್ನು ಈಡೇರಿಸಲಾ ಗುವುದು ಎಂದು ಭರವಸೆ ನೀಡಿದರು.

ರೈತ ಬೆಳಗಾರರ ಅಧ್ಯಕ್ಷ ಸೋಮರಾವ್ ದೇಸಾಯಿ, ನಾಗರಾಜ ದೇಶಪಾಂಡೆ, ಲಕ್ಷ್ಮಣ ರಂಗನಾಯ್ಕರ, ವಿಠ್ಠಲ ಚವ್ಹಾಣ, ಗೋವಿಂದಪ್ಪ ತಳವಾರ, ಹನುಮಂತ ರಣತೂರ, ಶಂಕ್ರಪ್ಪ ಕೂಡವಕ್ಕಲ್, ಯುಸುಫ್ ಚಡ್ಡಿ, ಬಸವರಾಜ ಅಲ್ಲಾಪೂರ, ಸುಬಾಷ ಸಾದರ, ನಾಗರಾಜ ಸುಬಗಟ್ಟಿ, ರಾಮಣ್ಣ ಬೆಳಹಟ್ಟಿ, ಸಿದ್ದಪ್ಪ ಇಂಗಳಹಳ್ಳಿ, ರಸುಲ ಹುಬ್ಬಳ್ಳಿ, ಇನ್ನೂ ಅನೇಕ ರೈತ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here