ಧಾರವಾಡ

ಆತ್ಮದ ಉನ್ನತಿಗೆ ಧರ್ಮ, ಸಂಸ್ಕಾರ, ಪ್ರವಚನ ಅಗತ್ಯ

ಧಾರವಾಡ,ಆ.5- ಮಾನವನ ದೇಹ, ಮನಸ್ಸು ಹಾಗೂ ಆತ್ಮ ಎಂಬ ಮೂರು ಘಟಕಗಳಿಂದ ಕೂಡಿದ್ದು ದೇಹ ಪೋಷಣೆಗೆ ಅನ್ನ ಮತ್ತು ಮನೋವಿಕಾಸಕ್ಕೆ ಜ್ಞಾನ ಹೇಗೆ ಅವಶ್ಯವೋ ಹಾಗೆ ಆತ್ಮದ ಉನ್ನತಿಗೆ ಧರ್ಮ, ಸಂಸ್ಕಾರ, ಪ್ರವಚನಗಳು ಅಗತ್ಯ ಎಂದು ಹೊಸಳ್ಳಿಯ ಶ್ರೀ ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು.

ಶಹರದ ಶ್ರೀ ಉಳವಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶ್ರಾವಣ ಮಾಸದ ಧಾರ್ಮಿಕ ಸಮಾರಂಭ ಹಾಗೂ ಶ್ರೀ ಹಾಲಕೇರಿ ಅನ್ನದಾನೇಶ್ವರ ಪುರಾಣ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಮನುಷ್ಯನ ಬದುಕಿಗೆ ಬೇಕಾಗುವ ಹಾಗೂ ಆತನ ಜೀವನಕ್ಕೆ ಅನಕೂಲವಾಗುವ ಮತ್ತು ಪ್ರೇರಣೆ ನೀಡುವ ತತ್ವಸಿದ್ಧಾಂತವನ್ನು ನೀಡಿದವರು ಶರಣರು. ಗುರು, ಲಿಂಗ, ಜಂಗಮ, ಕಾಯಕ, ದಾಸೋಹದಂತಹ ಅತ್ಯಂತ ಶ್ರೇಷ್ಠ ತತ್ವಗಳನ್ನು ನೀಡಿದ್ದಾರೆ. ಆದರೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಜನರು ವಿಫಲರಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಕಿತ್ತೂರಿನ ನಿಚ್ಚಣಕಿ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರ ಸ್ವಾಮಿಜಿ ಮಾತನಾಡಿ, ಶ್ರಾವಣ ತಿಂಗಳಲ್ಲಿ ನಡೆಯುವ ಶ್ರಾವಣ ಸಮಾರಂಭಗಳು ಮನಷ್ಯನ ಬದುಕಿನ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ಮಾಡುತ್ತವೆ. ತಿಂಗಳ ಕಾಲ ತಾವುಗಳೆಲ್ಲರೂ ಪ್ರವಚನದಲ್ಲಿ ಪಾಲ್ಗೊಂಡಾಗ ಬದುಕಿನ ಮನೋಬಲ ಹೆಚ್ಚುತ್ತದೆ. ಶ್ರಾವಣ ಮಾಸದ ನಿತ್ಯ ಕಾರ್ಯಕ್ರಮ, ಸಮಾರಂಭಗಳಲ್ಲಿ ಭಾಗವಹಿಸಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದರು.

ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆ ಅಧ್ಯಕ್ಷ ಸಣ್ಣಬಸಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ವಿಜಯೇಂದ್ರ ಪಾಟೀಲ, ಡಾ.ಕೆ.ಎಂ ಗೌಡರ, ಜಿ.ಬಿ.ಅಳಗವಾಡಿ, ಟಿ.ಎಲ್ ಪಾಟೀಲ, ಎಂ.ಎಲ್ ಹಿರೇಗೌಡರ, ಸುರೇಶ ಹೆಗ್ಗೇರಿ

ಎನ್.ಬಿ.ಗೋಲಣ್ಣವರ, ಡಿ.ಬಿ.ಪಾಟೀಲ, ಪಿ.ಎಸ್.ದಂಡಿನ, ಗುರುಪುತ್ರಪ್ಪ ಶಿರೋಳ ಉಪಸ್ಥಿತರಿದ್ದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಬಸವರಾಜ ಸೂರಗೊಂಡ ಸ್ವಾಗತಿಸಿದರು. ಬಾಬಣ್ಣಾ ವಾಣಿ ಪರಿಚಯಿಸಿ, ವಂದಿಸಿದರು. ವಿ.ಎಸ್.ಅರಳೇಲಿಮಠ ಪ್ರಾಸ್ತಾವಿಕ ಮಾತನಾಡಿದರು. ನೀಲಾಂಬಿಕಾ ಕರಿ ನಿರೂಪಿಸಿದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: