ಹದಗೆಟ್ಟ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಚಿಗರಿ

0
44

ಧಾರವಾಡ,ಆ.5- ಮಳೆಗಾಲದಿಂದ ಕೆಟ್ಟ ರಸ್ತೆಯಲ್ಲಿ ಬಿಆರ್‍ಟಿಎಸ್ ಬಸ್ ಸಿಲುಕಿದ ಪರಿಣಾಮ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾದ ಘಟನೆ ಇಂದು ಬೆಳಿಗ್ಗೆ ನಡೆಯಿತು.

ಇಲ್ಲಿನ ಹೊಸ ಬಸ್ ನಿಲ್ದಾಣದ ಹಿಂದಿರುವ ಬಿಆರ್‍ಟಿಎಸ್ ಡಿಪೋದಿಂದ ಹೊರ ಬರುವ ಹಂತದಲ್ಲಿ ಮಳೆ ಹಿನ್ನೆಲೆಯಲ್ಲಿ ರಸ್ತೆ ಕುಸಿದಿತ್ತು. ಈ ಸಂದರ್ಭದಲ್ಲಿ ಡಿಪೋದಿಂದ ಬಸ್ ಹೊರ ಬರುತ್ತಿದ್ದಾಗ ಬಸ್ ಸಿಲುಕಿಕೊಂಡಿತು. ಆಗ ಬಸ್ ಚಾಲಕರು ಮತ್ತು ಸಿಬ್ಬಂದಿ ಸೇರಿ ಬಸ್‍ನ್ನು ಎತ್ತಲು ಪರದಾಡಬೇಕಾಯಿತು.

ಇದರಿಂದ 30 ಕ್ಕೂ ಹೆಚ್ಚು ಬಸ್‍ಗಳು ಡಿಪೋದಲ್ಲಿ ಉಳಿದವು. ಹೀಗಾಗಿ

ಬಸ್‍ಗಳು ರಸ್ತೆಗೆ ಇಳಿಯಲು ಕೆಲ ಹೊತ್ತು ವಿಳಂಬ ಕೂಡ ಆಯಿತು.

ಜೊತೆಗೆ ಕರ್ತವ್ಯಕ್ಕೆ ತೆರಳಬೇಕಿದ್ದ ಚಾಲಕರು ಪರದಾಡುವಂತಾಯಿತು.

ಸತತ ಮಳೆ ಹಿನ್ನೆಲೆಯಲ್ಲಿ ರಸ್ತೆ ಹದಗೆಟ್ಟಿದ್ದು ಒಂದೆಡೆಯಾದರೆ, ರಸ್ತೆ ಪಕ್ಕದಲ್ಲಿ ಕೈಕೊಂಡ ಒಳ ಚರಂಡಿ ಕಾಮಗಾರಿ ಕಳಪೆ ಆಗಿದ್ದು ಕೂಡ ಕಾರಣವಾಯಿತು.

LEAVE A REPLY

Please enter your comment!
Please enter your name here