ಕೇಂದ್ರ ಕಾರಾಗೃಹದಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡ ಕೈದಿಗಳು

0
50

ಧಾರವಾಡ,ಆ.5- ನಿಷೇಧಿತ ವಸ್ತುಗಳ ಸಾಗಾಟ, ಕಾರಾಗೃಹದ ನಿಯಮಗಳ ಉಲ್ಲಂಘನೆ, ಬಂಧಿಗಳಿಗೆ ರಾಜ ಮರ್ಯಾದೆ ಲಭಿಸುತ್ತಿರುವುದು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ…!

ಮಾದಕ ವಸ್ತು ಪೂರೈಕೆ, ಕೈದಿಗಳ ಮಾರಾಮಾರಿ ಹೀಗೆ ಒಂದಿಲ್ಲ ಒಂದು ವಿಷಯಕ್ಕೆ ಸುದ್ದಿಯಾಗುವ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಕೇಕ್ ಕತ್ತರಿಸಿ ಜನ್ಮ ಆಚರಿಸಿಕೊಂಡಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳು 2 ದಿನಗಳ ಹಿಂದೆ ಕೈದಿಯೊಬ್ಬನ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನ್ಮ ದಿನದ ಸಂಭ್ರಮವನ್ನು ತಮ್ಮ ಮೊಬೈಲ್‍ನಲ್ಲಿ ಸಹ ಸೆರೆ ಹಿಡಿದ್ದಾರೆ. ಈ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಜೈಲು ಅಧಿಕಾರಿಗಳು ಮಾತ್ರ ಜಾಣ ಕುರುಡು ತೋರಿಸುತ್ತಿದ್ದಾರೆ.

ಇತ್ತಿಚೆಗೆ ಹುಬ್ಬಳ್ಳಿ ಸಬ್‍ಜೈಲ್ ಬಳಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಜೈಲು ಸೇರಿರುವ ಗಣೇಶ ಜಾಧವ ತನ್ನ ಜನ್ಮ ದಿನವನ್ನು ಇತರ ಕೈದಿಗಳೊಂದಿಗೆ ಆಚರಿಸಿಕೊಂಡಿದ್ದಾನೆ.

ಜೈಲಿಗೆ ಮಾದಕ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂಬ ಕಾರಣಕ್ಕೆ ಹೊರ ಹಾಗೂ ಒಳ ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲಾಗಿದೆ. ಆದಾಗ್ಯೂ ಸಹ ರಾಜಾ ರೋಷವಾಗಿ ದಿನನಿತ್ಯ ಖೈದಿಗಳಿಗೆ ಮೊಬೈಲ್, ಊಟ, ತಿಂಡಿ, ಅವರ ಬೇಡಿಕೆ ಯಂತೆ ಅಗತ್ಯ ವಸ್ತುಗಳು ಸರಬರಾಜು ಆಗುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಈಗ ವಿಚಾರಣಾಧೀನ ಕೈದಿಗಳಿಗೆ ಕೇಕ್ ಹಾಗೂ ಮೊಬೈಲ್ ನೀಡಿದವರು ಯಾರು ಎಂಬುದು ತನಿಖೆ ನಡೆಯಬೇಕಿದೆ.

ಕೇಂದ್ರ ಕಾರಾಗೃಹದಲ್ಲಿ ಇಷ್ಟೆಲ್ಲ ಅವಾಂತಗಳು ನಡೆಯುತ್ತಿದ್ದರೂ ಅಧಿಕಾರಿಗಳು ತಮಗೇನು ಏನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿರುವ ರೀತಿ, ಜೈಲಿನ ಸಿಬ್ಬಂದಿ ಮೇಲಿನ ಅನುಮಾನಕ್ಕೆ ಆಸ್ಪದ ಒದಗಿಸಿದೆ.

LEAVE A REPLY

Please enter your comment!
Please enter your name here