ಮಹಾನಗರ ಪಾಲಿಕೆ: ಸಹಾಯವಾಣಿ ಕೇಂದ್ರ

0
47

ಬೆಳಗಾವಿ,ಆ.5- ಕಳೆದ 8-10 ದಿನಗಳಿಂದ ಬೆಳಗಾವಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅತಿಯಾದ ಮಳೆಯಿಂದ ತೊಂದರೆಗೆ ಒಳಗಾಗುವ ನಗರ ವ್ಯಾಪ್ತಿಯ ತಗ್ಗು ಪ್ರದೇಶದ ವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪಾಲಿಕೆಯ ವತಿಯಿಂದ ರಕ್ಷಣಾ ಕಾರ್ಯಾಚರಣೆಯ ತಂಡಗಳನ್ನು ರಚಿಸಲಾಗಿದೆ.

ಸದರಿ ತಂಡಗಳ ಮೂಲಕ ಸಹಾಯ ಸಹಕಾರ ಒದಗಿಸುವ ಕಾರ್ಯವನ್ನು ಪಾಲಿಕೆ ನೆರವೇರಿಸುತ್ತಿದೆ. ಮಳೆಯಿಂದ ತೊಂದರೆಗೆ ಒಳಗಾಗುವ ನಗರ ವಾಸಿಗಳ ಅನುಕೂಲಕ್ಕಾಗಿ ದೂರುಗಳನ್ನು ಸ್ವೀಕರಿಸಲು 24 ಗಂಟೆಗಳ ಕಾಲ ಕಾರ್ಯನಿರತವಿರುವ ಸಹಾಯವಾಣಿ ಕೇಂದ್ರವನ್ನು ಪಾಲಿಕೆಯ ಮುಖ್ಯ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿದೆ.

ಪಾಲಿಕೆಯ ವತಿಯಿಂದ ರಚಿಸಲಾದ ರಕ್ಷಣಾ ಕಾರ್ಯಾಚರಣೆಯ ತಂಡಗಳ ಸಹಾಯ ಸಹಕಾರವನ್ನು ತಗ್ಗು ಪ್ರದೇಶದ ವಾಸಿಗಳು ಕೋರಬೇಕಾದಲ್ಲಿ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 0831-2405316 ಅಥವಾ 2405337ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here