ಪಿಓಪಿ ಮೂರ್ತಿ ತಯಾರಿಕೆ : ಅಧಿಕಾರಿಗಳಿಂದ ಪರಿಶೀಲನೆ

0
52

ಧಾರವಾಡ,ಆ.5- ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅಗಸ್ಟ್ 2 ಹಾಗೂ 4ರಂದು ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಬಳಿಯ ಖಾಸಗಿ ಜಾಗದಲ್ಲಿ ಗಣೇಶ ಮೂರ್ತಿಗಳ ತಯಾರಿಕೆಯ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ವಿಜಯಕುಮರ ಕಡಕ್‍ಭಾವಿ ಹಾಗೂ ಸೋಮಶೇಕರ ಹಿರೇಗೌಡರ, ಸಹಾಯಕ ಪರಿಸರ ಅಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪರಿಸರ ಅಭಿಯಂತ್ರರಾದ ಟಿ.ಶ್ರೀಧರ ಮತ್ತು ಸಂತೋಷ ಯರಂಗಳಿ ಜಂಟಿಯಾಗಿ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಅಚ್ಚು ಉಪಯೋಗಿಸಿ ಮಣ್ಣಿನಿಂದ ಗಣೇಶ ವಿಗ್ರಹಗಳನ್ನು ತಯಾರು ಮಡುತ್ತಿದ್ದು, ಸುಮಾರು 26 ಪಿಓಪಿ ಗಣೇಶ ಮೂರ್ತಿಗಳ ಅಚ್ಚು ಇರುವುದು ಕಂಡುಬಂದಿತ್ತು.

ಪರಿವೀಕ್ಷಣೆ ಸಂದರ್ಭದಲ್ಲಿ ಸದರಿಯವರು ಉಪಯೋಗಿಸುವ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯಕ್ಕೆ ಸಲ್ಲಿಸಲಾಯಿತು. ಈ ವರದಿ ಅನ್ವಯ ಮಣ್ಣಿನಲ್ಲಿ ಯಾವುದೇ ಪಿಓಪಿ ಅಂಶವು ಇಲ್ಲದೆ ಕಂಡು ಬಂದಿತು. ಈ ಮೂಲಕ ಮೂರ್ತಿ ತಯಾರಕರಿಗೆ ಪಿಓಪಿ ಗನೇಶ ವಿಗ್ರಹಗಳನ್ನು ತಯಾರಿಸಬಾರದೆಂದು ಎಚ್ಚರಿಕೆ ನೀಡಲಾಯಿತು. ಒಂದು ವೇಳೆ ಪಿಓಪಿ ಮೂರ್ತಿ ತಯಾರಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಮೂರ್ತಿ ತಯಾರಕ ಪ್ರವೀಣ ಚಿತ್ರಗಾರ ಅವರಿಗೆ ಎಚ್ಚರಿಕೆ ನೀಡಿದರು. ಧಾರವಾಡ ಜಿಲ್ಲೆಯಲ್ಲಿ ಪಿಓಪಿ ಬಳಸಿ ಮೂರ್ತಿಗಳನ್ನು ತಯಾರಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here