ಸಿಬ್ಬಂದಿಗಳ ಬೀಳ್ಕೊಡುವ ಸಮಾರಂಭ

0
47

ಬೆಳಗಾವಿ,ಆ.5- ಸ.ಶಿ.ಸ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ.ಶಿ.ಸ ಸಮಿತಿ ಶೇಡಬಾಳ ವತಿಯಿಂದ ಶ್ರೀ. ಎಸ್.ಟಿ. ಪಾಟೀಲ ದೈಹಿಕ ನಿರ್ದೇಶಕರು ಮತ್ತು ಶ್ರೀ. ಎ.ಎಸ್. ಕಾಂಬಳೆ ಸಿಬ್ಬಂದಿ ಇವರಿಗೆ ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು,

ಸ್ವರಾಂಜಲಿ ಗುಂಪಿನವರಿಂದ ಪ್ರರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ, ನಿರ್ಮಲಾ ಆಯ್.ಗಡಾದ ಸ್ವಾಗತ ಭಾಷಣ ಮಾಡಿದರು. ನಿವೃತ್ತ್ತ ಪ್ರಾಂಶುಪಾಲರಾದ ಡಾ. ಎ.ಆರ್. ರೊಟ್ಟಿ , ಶ್ರೀ. ಬಿ.ಎಂ. ಹುರಕಡ್ಲಿ ಹಾಗೂ ಶ್ರೀ. ಅರ್.ವಿ.ಕುಲಕರ್ಣಿ ,ಶ್ರೀ ಎಸ್,ಸಿ,ಗಡ್ಡ್ದಿ , ಶ್ರೀಮತಿ ಬಿ.ಬಿ. ಹಿರೇಮಠ , ಶ್ರೀ ವಿ, ಬಿ, ತುರಮರಿ ಇವರು ನಿವೃತ್ತ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು. ಸ.ಶಿ.ಸ ಸಮಿತಿಯ ಅಧ್ಯಕ್ಷರಾದ ಶ್ರೀ. ಜಗದೀಶ. ಎ. ಸವದತ್ತಿ ಅವರು ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದರು. ಪ್ರೋ. ನಾಗವೇಣಿ ಡಿ. ಧರೆನ್ನವರ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರೋ. ರವಿ ದಂಡಗಿ ವಂದನಾರ್ಪಣೆ ಮಾಡಿದರು. ಪದವಿ , ಪದವಿಪೂರ್ವ ಮಹಾವಿದ್ಯಾಲಯ, ಬಿ,ಬಿ,ಎ , ಎಂ.ಕಾಂ ಮಹಾವಿದ್ಯಾಲಯಗಳ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here