ಕಾರಜೋಳರಿಗೆ ಉಪಮುಖ್ಯಮಂತ್ರಿ ಮಾಡಿ

0
42

ರಾಯಬಾಗ,ಆ.5- ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರಕಾರದಲ್ಲಿ ಹಿರಿಯ ಶಾಸಕರು ಹಾಗೂ ಮಾದಿಗ ಸಮಾಜದ ನಾಯಕರಾದ ಗೋವಿಂದ ಕಾರಜೋಳ ಅವರಿಗೆ ಗೃಹ ಖಾತೆ ಸೇರಿದಂತೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಹಾಗೂ ರಾಯಬಾಗ ಮತಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಡಿ.ಎಂ.ಐಹೊಳೆಯವರಿಗೆ ಸಂಪುಟ ದರ್ಜೇ ಸಚಿವ ಸ್ಥಾನ ನೀಡಬೇಕೆಂದು ರಾಯಬಾಗ ಮಾದಿಗ ಮಿಸಲಾತಿ ಹೋರಾಟ ಸಮಿತಿಯ ಮುಖಂಡರು ಆಗ್ರಹಿಸಿದರು.

ಶನಿವಾರ ಪಟ್ಟಣದ ನೀರಾವರಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಯಿಸಿ ಮಾತನಾಡಿದರು. ಶ್ರೀ ಗೋವಿಂದ ಕಾರಜೋಳ ಅವರು ಮಾದಿಗ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ ಬಿಜೆಪಿ ಪಕ್ಷದಿಂದ ಸತತ ನಾಲ್ಕನೆ ಭಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ಕಾರಜೋಳ ಅವರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಹೀಗಾಗಿ ಅವರಿಗೆ ಹಾಗೂ ಡಿ.ಎಂ.ಐಹೊಳೆ ಅವರಿಗೆ ಯಡಿಯೂರಪ್ಪ ಸಂಪುಂಟದಲ್ಲಿ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಮಾದಿಗ ಸಮುದಾಯದವರು 45 ಲಕ್ಷಕ್ಕಿಂತ ಹೆಚ್ಚು ಜನ ಇದ್ದಾರೆ ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಕಾರಜೋಳ ಅವರಿಗೆ ಹಾಗೂ ಐಹೊಳೆ ಅವರಿಗೆ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸತತವಾಗಿ 30 ವರ್ಷಗಳಿಂದ ಮಾದಿಗ ಸಮುದಾಯವು ಹೋರಾಟ ಮಾಡುತ್ತಾ ಬಂದಿದೆ. ಆದರೆ ಇನ್ನು ವರದಿ ಜಾರಿಯಾಗಿಲ್ಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನ್ನವರು ಕೂಡಲೇ ಸದಾಶಿವ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾದಿಗ ಮಿಸಲಾತಿ ಹೋರಾಟ ಸಮಿತಿಯ ಮುಖಂಡರಾದ ಶಿವಾಜಿ ಮೈಶಾಳೆ, ರಾಜು ಮೈಶಾಳೆ, ವಿಜಯ ಹಕ್ಯಾಗೋಳ, ವೆಂಕಟೇಶ ಕಮಾಲ, ಅನೀಲ ಮೈಶಾಳೆ, ಸದಾಶಿವ ಹುಂಜ್ಯಾಗೋಳ, ಉದಯ ರೆಡ್ಡಿ, ಮಹೇಶ ಕರಮಡಿ, ರವಿ ದೇವರಮನಿ, ರಾಜು ಐಹೊಳೆ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here