ಸ್ಮಶಾನ ಭೂಮಿ ಜಾಗದಲ್ಲಿನ ಕಟ್ಟಡ ತೆರವುಗೊಳಿಸಿ

0
53

ರಾಯಬಾಗ,ಆ.5- ರಾಯಬಾಗ ಪಟ್ಟಣದ ಹಿಂದು ಸ್ಮಶಾನ ಭೂಮಿ ರಿ.ಸ.ನಂ. 839ರಲ್ಲಿ ಸುಳ್ಳು ಮಾಹಿತಿ ಸಲ್ಲಿಸಿ ಮಂಜೂರಾತಿ ಪಡೆದು ಪಟ್ಟಣದ ನಾಗರಿಕರಿಗೆ ತಿಳಿಯದಂತೆ ಪ್ರಸ್ತಾವಣೆಯನ್ನು ಗುಪ್ತವಾಗಿ ರವಾನಿಸಿ ಮಂಜೂರಾತಿ ಪಡೆದು ಸ್ಮಶಾನ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಹಾಗೂ ಸಧ್ಯ ನಿರ್ಮಿಸುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಿ ರಿ.ಸ.ನಂ.839ರಲ್ಲಿ ಮೂಲ ದಾಖಲೆಗಳ ಪ್ರಕಾರ ಇರುವ ಒಟ್ಟು ಕ್ಷೇತ್ರ 14ಎಕರೆ 23ಗುಂಟೆ ಸರ್ವೇ ಮಾಡಿ ಪೂರ್ತಿ ಕ್ಷೇತ್ರಕ್ಕೆ ಹದ್ದು ಬಸ್ತಿ ಮಾಡಿ ಆವರಣ ಗೊಡೆ ನಿರ್ಮಿಸಬೇಕೆಂದು ಆಗ್ರಹಿಸಿ ಶನಿವಾರ ರಾಯಬಾಗ ಪಟ್ಟಣದ ಹಿಂದೂ ಸ್ಮಶಾನ ಭೂಮಿ ಸಂರಕ್ಷಣಾ ಸಮಿತಿಯವರು ರಾಯಬಾಗ ತಹಶೀಲ್ದಾರ ಡಿ.ಎಚ್.ಕೋಮಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಯಬಾಗ ಪಟ್ಟಣದ ಸಮಸ್ತ ಹಿಂದೂ ಸಮಾಜವು ಯಾವುದೇ ರೀತಿಯ ಬೇಧ ಭಾವವಿಲ್ಲದೆ ಸಮಾನವಾಗಿ ಬಳಕೆ ಮಾಡುತ್ತಾ ಬಂದಿರುವ ಸ್ಮಶಾನ ಭೂಮಿಯು ರ.ಸ.ನಂ. 839 ಒಟ್ಟು ಕ್ಷೇತ್ರ 14ಎಕರೆ 23ಗುಂಟೆ ಇದ್ದು ಅನೇಕ ತಲೆಮಾರುಗಳಿಂದ ಹಿಂದುಗಳ ಸ್ಮಶಾನ ಭೂಮಿಯಾಗಿದೆ. ಆದರೆ ಇತ್ತಿಚೆಗೆ ಸರಕಾರಿ ದಾಖಲೆಗಳ ಬಗ್ಗೆ ತಹಶೀಲ್ದಾರ ಕಾರ್ಯಾಲಯದಲ್ಲಿ ಕಳೆದ 10-15ವರ್ಷಗಳಲ್ಲಿ ಸೇವೆ ಸಲ್ಲಿಸಿ ಹೋಗಿರುವ ಕೆಲವರು ತಮ್ಮ ಭ್ರಷ್ಟ ಬುದ್ಧಿಗೆ ತೋಚಿದಂತೆ ಕೆಲವು ಪಟ್ಟಬದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಿ ರ.ಸ.ನಂ. 839ರಲ್ಲಿರುವ ಹಿಂದು ಸ್ಮಶಾನ ಭೂಮಿ ಬಗ್ಗೆ ಅತ್ಯಂತ ಕೇವಲವಾಗಿ ವರ್ತಿಸಿ ಅದು ಈ ಹಿಂದೆ ಖಾಸಗಿ ಜಮೀನು ಆಗಿತ್ತು. ಅದು ಗಾಯರಾಣವಾಗಿತ್ತು ಹಾಗೂ ಸರಕಾರಿ ಜಮೀನುವಾಗಿತ್ತು ಎಂಬ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರಕಾರಿ ಕಟ್ಟಡಕ್ಕೆ ಮಂಜೂರಾತಿ ಪಡೆದಿರುತ್ತಾರೆ. ಇಂತಹ ತಪ್ಪು ವರದಿಯನ್ನು ಸಲ್ಲಿಸಿರುವ ಸರಕಾರಿ ಸೇವೆಯಲ್ಲಿದ್ದ ಸಿಬ್ಬಂದಿ ವರ್ಗದವರನ್ನು ತಕ್ಷಣ ವಜಾ ಮಾಡಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕು.

ರಾಯಬಾಗ ಪಟ್ಟಣದಲ್ಲಿ ಮೊದಲಿಗಿಂತ 40%ರಷ್ಟು ವಲಸಿಗರು ಬಂದು ನೆಲೆಸಿದ್ದರಿಂದ ಪಟ್ಟಣದ ಜನಸಂಖ್ಯೆ ವಿಪರೀತಹೆಚ್ಚಾಗಿದೆ. ಈ ಜನಸಂಖ್ಯೆಯ ಅನುಗುಣವಾಗಿ ಕನಿಷ್ಠ 40 ಎಕರೆಯಷ್ಟು ಸ್ಮಶಾನ ಜಮೀನನ್ನು ಕಾಯ್ದಿರಿಸಬೇಕಾಗಿದೆ. ಆದರೆ ರ.ಸ.ನಂ. 839ರಲ್ಲಿ 14ಎಕರೆ 23ಗುಂಟೆಯಲ್ಲಿಯೇ ಸರಕಾರಿ ಕಟ್ಟಡಗಳನ್ನು ಕಟ್ಟಿದ್ದರಿಂದ ಹಿಂದೂ ಸ್ಮಶಾನ ಭೂಮಿ ಕೇವಲ 3ಎಕರೆ ಮಾತ್ರ ಉಳಿದಿರುವುದು ಕಂಡುಬರುತ್ತಿದೆ.

ಹೀಗಾಗಿ ಈ ಸ್ಮಶಾನ ಭೂಮಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ಸುಳ್ಳು ಮಾಹಿತಿ ನೀಡಿ ಪ್ರಸ್ತಾವಣೆ ಸಲ್ಲಿಸಿ ಪಟ್ಟಣದ ನಾಗರಿಕರಿಗೆ ಅರಿವಿಗೆ ಬಾರದಂತೆ ಪಡೆದಿರುವ ಮಂಜುರಾತಿಗಳು ಅನ್ಯಾಯ ಹಾಗೂ ಮೊಸ ವಂಚನೆಗಳಿಂದ ಕೂಡಿದ್ದು, ಭೂ ಮಾಪನ ಇಲಾಖೆಯ ಮೂಲ ದಾಖಲೆಗಳ ಪ್ರಕಾರ ಪಿಟಿ ಸೀಟ ಹಾಗೂ ಟಿಪ್ಪಣಿಗಳಲ್ಲಿ ನಮೂದಿಸಿರುವ ಲೆಕ್ಕಾಚಾರಗಳ ಪ್ರಕಾರ ನಿಖರವಾಗಿ ಅಳತೆ ಮಾಡಬೇಕು. ಮತ್ತು ರಾಯಬಾಗ ಪಟ್ಟಣದ ಸಮಸ್ತ ಹಿಂದೂ ಸಮಾಜದ ಕಣ್ಣ ಮುಂದೆಯೇ ಗುರುತು ಮಾಡಿ ಕಲ್ಲು ಹಾಕಿಸಿ ರ.ಸ.ನಂ. 839ರ ಮೂಲ ಕ್ಷೇತ್ರದ ಪ್ರಕಾರ 14ಎಕರೆ 23ಗುಂಟೆ ಪೂರ್ತಿ ಕ್ಷೇತ್ರದಲ್ಲಿ ನಿರ್ಮಿಸಿರುವ ಎಲ್ಲಾ ಕಟ್ಟಡಗಳ ಮಂಜೂರಾತಿ ಆದೇಶಗಳನ್ನು ರದ್ದುಗೊಳಿಸಿ ತೆರವುಗೊಳಿಸಬೇಕು. ಇಲ್ಲದಿದ್ದರೆ ರಾಯಬಾಗ ಪಟ್ಟಣ ಬಂದ ಮಾಡಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಮುಂದಿನ ಘಟನೆಗಳಿಗೆ ತಾಲೂಕಾಡಳಿತವೇ ನೇರ ಹೊಣೆಯಾಗುತ್ತದೆ ಎಂಬ ವಿಷಯನ್ನೋಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು, ಪಟ್ಟಣದ ವ್ಯಾಪಾರಸ್ಥರು ಹಾಗೂ ನಾಗರೀಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here