ಸಿಕ್ಯಾಬ ಕಾಲೇಜಿಗೆ 4 ರ್ಯಾಂಕ

0
47

ವಿಜಯಪುರ,ಆ.5- ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಿಕ್ಯಾಬ ಯುನಾನಿ ಮೇಡಿಕಲ್ ಕಾಲೇಜಿನ 04 ವಿದ್ಯಾರ್ಥಿನಿಯರು ಬೆಂಗಳೂರಿನ ರಾಜೀವ ಗಾಂದಿ ಆರೋಗ್ಯ ಮತ್ತು ವಿಜ್ಞಾನ ವಿಶ್ವ ವಿದ್ಯಾಲಯದಿಂದ ನೀಡಲ್ಪಡುವ 10 ರ್ಯಾಂಕಗಳಲ್ಲಿ 4 ರ್ಯಾಂಕಗಳನ್ನು ಪಡೆದಿದ್ದಾರೆ.

ಇಡೀ ವಿಶ್ವವಿದ್ಯಾಲಯದಿಂದ 10 ವಿದ್ಯಾರ್ಥಿಗಳಿಗೆ ರ್ಯಾಂಕ ನೀಡಲಾಗುತ್ತಿದ್ದು, 4 ರ್ಯಾಂಕಗಳು ಸಿಕ್ಯಾಬ ಯುನಾನಿ ಮೆಡಿಕಲ್ ಕಾಲೇಜಿನಿಂದಲೇ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಇಡೀ ವಿಶ್ವ ವಿದ್ಯಾಲಯಕ್ಕೆ ಕು.ಸೈಯದಾ ಪಾತಿಮಾ ಜೇಹರಾ-83.56% ಪ್ರಥಮ ರ್ಯಾಂಕ ಪಡೆದಿದ್ದು, ಕು.ಮಲಿಹಾ ಪಾತಿಮಾ-83.33% ದ್ವಿತೀಯ ರ್ಯಾಂಕ ಪಡೆದಿದ್ದಾಳೆ. ಕು.ಸಾರಾ ಅಫಸಿನ್-81.21% ಐದನೇಯ ರ್ಯಾಂಕ ಪಡೆದಿದ್ದು, ಕು.ಉಮ್ಮೇರುಮಾನ 81.09%,ಏಳನೇಯ ರ್ಯಾಂಕ ಪಡೆದಿದ್ದಾಳೆ.

ಪ್ರತಿವರ್ಷವೂ ಸಿಕ್ಯಾಬ ಯುನಾನಿ ಮೆಡಿಕಲ್ ಕಾಲೇಜಿನಿಂದ ಹಲವಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ರ್ಯಾಂಕ ಪಡೆದುಕೊಳ್ಳುತ್ತಾರೆ. ಈ ಸಲವು ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಪಾಸಾಗಿದ್ದು, ಪ್ರತಿಶತ ಫಲಿತಾಂಶ ಬಂದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾರ್ಥಿನಿಯರ ಮತ್ತು ಶಿಕ್ಷಕರ ಪರಿಶ್ರಮದಿಂದ ವಿಶ್ವವಿದ್ಯಾಲಯದ 10 ರ್ಯಾಂಕಗಳ ಪೈಕಿ 04 ರ್ಯಾಂಕಗಳು ಕಾಲೇಜಿನ ವಿದ್ಯಾರ್ಥಿನಿಗಳು ಪಡೆದು ಕಾಲೇಜು ಹಾಗೂ ಕಲಿತ ಸಂಸ್ಥೆಗೂ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here