ನಾಗರಪಂಚಮಿ ನಿಮಿತ್ಯ ಸ್ಮಶಾನದಲ್ಲಿ ವನಮಹೋತ್ಸವ

0
43

ಬೆಳಗಾವಿ,ಆ.5- ಪರಿಸರ ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಉಳಿಯಲು ಹಾಗೂ ವೃದ್ಧಿಸಲು ಸಾಧ್ಯ. ಆದ್ದರಿಂದ ಎಲ್ಲರೂ ಗಿಡ ಮರಗಳನ್ನು ಬೆಳೆಸುವಂತೆ ಡಾ.ವಾಯ್.ಬಿ.ಗಸಾರಿ ಅವರು ಕರೆ ನೀಡಿದರು.

ನಗರದ ಕಣಬರಗಿಯ ಹಿಂದು ಸ್ಮಶಾನದಲ್ಲಿ ರವಿವಾರ ನಾಗರಪಂಚಮಿ ನಿಮಿತ್ಯ ಬಾಲ ಸಂಗೀತ ಭಜನಾ ಮೇಳ, ಡಾ.ವಾಯ್.ಬಿ.ಗಸಾರಿ ಹಾಗೂ ಇಂಡಾಲ್ಕೊ ಕಂಪನಿ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ನಗರೀಕರಣದ ಹೆಸರಿನಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ಇದರಿಂದ ನಮ್ಮ ಪರಿಸರ ನಾಶವಾಗಿ ಉಸಿರಾಡಲು ಸರಿಯಾದ ಗಾಳಿ ಸಿಗುತ್ತಿಲ್ಲ. ಮುಂದಿನ ಜನಾಂಗಕ್ಕೆ ಒಳ್ಳೆಯ ವಾತಾವರಣವನ್ನು ಕಟ್ಟಿ ಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಗಿಡಮರ ಬೆಳೆಸಿ ನಾಡು ಉಳಿಸಿ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here