ಗುರುಸಿದ್ದಪ್ಪ ರಾವಳ ನಿಧನ

0
136

ಗೋಕಾಕ, ಆ. 24- ಇಲ್ಲಿನ ಲಿಂಗಾಯತ ಬಣಗಾರ ಸಮಾಜದ ಗಣ್ಯರು ಹಾಗೂ ಹಿರಿಯರಾಗಿದ್ದ ಗುರುಸಿದ್ದಪ್ಪ ಪೀತಾಂಬರಪ್ಪ ರಾವಳ (94 ವರ್ಷ) ಇವರು ಶನಿವಾರ ಬೆಳಿಗ್ಗೆ ಗೋಕಾಕದ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಗೋಕಾಕ ಪಟ್ಟಣದಲ್ಲಿ ಸುಮಾರು 50 ವರ್ಷಗಳ ಕಾಲ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ಇವರು ತಮ್ಮ ಶಾಂತ ಹಾಗೂ ಸೌಜನ್ಯದ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಗೋಕಾಕಿನ ಖ್ಯಾತ ಎಂಜಿನಿಯರ್ ವಿನಾಯಕ ರಾವಳ ಮೃತರ ಪುತ್ರರಲ್ಲೊಬ್ಬರು.

ದಿವಂಗತರ ಅಂತ್ಯಕ್ರಿಯೆಯು ಶನಿವಾರ ಸಂಜೆ ಗೋಕಾಕದಲ್ಲಿ ನೆರವೇರಿತು. ಪಟ್ಟಣದ ಗಣ್ಯರು, ಸರ್ವ ಸಮಾಜದ ನಾಗರಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here