ಭಾಷೆ ಸಾಧನೆಗೆ ಅಡ್ಡಿ ಅಲ್ಲ – ಡಾ. ನಾಯ್ಕರ

0
32

ಬೆಳಗಾವಿ,ಆ.24- ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಸಾಧನೆಗೆ ಎಂದು ಅಡ್ಡಿ ಆಗುವುದಿಲ್ಲ, ವಿದ್ಯಾರ್ಥಿಗಳ ಸತತ ಪ್ರಯತ್ನ ಮತ್ತು ಪರಿಶ್ರಮ ಪೂರಕಗಳೆಂದು ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಎನ್.ನಾಯ್ಕರ ಅಭಿಪ್ರಾಯಪಟ್ಟರು. ಮಹಾವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡ , ಮರಾಠಿ ಮತ್ತು ಇತರ ಮಾತೃ ಭಾಷೆಗಳಲ್ಲಿ ತೇರ್ಗಡೆ ಹೊಂದಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿಶೇಷ ಮತ್ತು ವಿನೂತನ Sಠಿoಞeಟಿ ಇಟಿgಟish ತರಬೇತಿಯ 40 ದಿನದ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 24/08/2019 ರಂದು ಜರುಗಿತು.

ಇಂದಿನ ವಿದ್ಯಾರ್ಥಿಗಳು ಭಾಷೆಯನ್ನು ಅಡ್ಡಗೋಡೆಯನ್ನಾಗಿ ಮಾಡಿಕೊಂಡು ತಮ್ಮಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಅರಳಿಸದೇ ವಿಶೇಷವಾಗಿ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಜನೆಯಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯದಿಂದ ಈ ವಿಶೇಷ ಮತ್ತು ವಿನೂತನ ಶಿಬಿರ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

40 ದಿನಗಳವರೆಗೆ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ದೈನಂದಿನ ಚಟುವಟಿಕೆಗಳಲ್ಲಿ , ತರಗತಿಗಳಲ್ಲಿ ಮತ್ತು ವಿದ್ಯಾರ್ಜನೆಯಲ್ಲಿ ಇಂಗ್ಲೀಷನ್ನು ಯಾವ ರೀತಿ ಉಪಯೋಗ ಮಾಡಬಹುದು ಎಂಬುದನ್ನು ವಿಶೇಷ ತರಬೇತಿದಾರರಾದ ಶ್ರೀಮತಿ ದೀಪಾ ಚಿಮರೋಲ್ ಅವರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಯ ಪಡಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ತಾವು ಕಲಿತ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು.

ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಷಕ್ಷೆ ಶ್ರೀಮತಿ. ಶ್ವೇತಾ ಸಿ. ನಾಯ್ಕರ ಉಪಸ್ಥಿತರಿದ್ದರು.

ಈ ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಸುಧಾ ಅಂಗಡಿ, ಶ್ರೀ ಉತ್ತಮ ಸಾಂಬ್ರೇಕರ ತರಬೇತುದಾರರಾದ ಶ್ರೀಮತಿ ದೀಪಾ ಚಿಮರೋಲ್ ಮತ್ತು ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕುಮಾರಿ. ಶ್ರೇಯಾ ಕಾಂಬಳೆ ಸ್ವಾಗತಿಸಿದರು. ಕುಮಾರಿ. ಅಕ್ಷತಾ ವಂದಿಸಿದರು. ಕುಮಾರಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here