ಅಮೃತ ವಿದ್ಯಾಲಯಂ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

0
43

ಬೆಳಗಾವಿ,ಆ.24- ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಶಾಲೆಯಲ್ಲಿನ ವಿವಿಧ ತರಗತಿ ಮಕ್ಕಳು ಕೃಷ್ಣನ ಬಗ್ಗೆ ಭಾಷಣ, ಹಾಡು, ನೃತ್ಯಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದ್ದರು. 1 ರಿಂದ 5 ನೇ ತರಗತಿಯ ಮಕ್ಕಳಿಗಾಗಿ “ಛದ್ಮ ವೇಷ” ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ವಿವಿಧ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದರು.

ಇಸ್ಕಾನನ್ “ರಾಮಭದ್ರ ಪ್ರೀಯದಾಸ” ಈ ಸಮಾರಂಭಕ್ಕೆ ಅತಿಥೀಗಳಾಗಿ ಆಗಮಿಸಿದರು. ಅವರು ತಮ್ಮ ಭಾಷಣವನ್ನು ಶ್ಲೋಕದೊಂದಿಗೆ ಆರಂಭಿಸಿ ಮಕ್ಕಳಿಗೆ ಅನುಸರಿಸಲು ಹೇಳಿದರು. ಅವರು ಕೃಷ್ಣನ ಅನೇಕ ಹೆಸರುಗಳನ್ನು ಹೇಳಿ, ಮುಕುಂದ, ಕೇಶವ, ಧಾಮೋದರ, ಮುರಳಿ, ಮನೋಹರ, ಗಿರೀಧರ, ಗೋಪಾಲ, ಗೋವಿಂದ, ಹೆಸರುಗಳು ಏಕೆ ಮತ್ತು ಹೇಗೆ ಕರೆಯಲ್ಪಡುತ್ತವೆ ಎಂದು ಸುಂದರವಾಗಿ ವಿವರಿಸಿ ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಚರಂತಿಮಠ ಅವರಿಗೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಹೇಳಿದರು. ಈ ಸಮಾರಂಭವು “ ದಹಿ ಹಂಡಿ” ಒಡೆಯುವುದರೊಂದಿಗೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here