ಯಶಸ್ವಿಯಾಗಿ ಮುಕ್ತಾಯಗೊಂಡ ಭಜನಾ ಸ್ಪರ್ಧೆ

0
31

ಯಮಕನಮರಡಿ,ಆ.24- ಸಮೀಪದ ಹತ್ತರಗಿ ಸುಕ್ಷೇತ್ರ ಋಗ್ವೇದಿ ಮಠದ ಹರಿಮಂದಿರದಲ್ಲಿ ಮೂರು ದಿನಗಳವರೆಗೆ ಜರುಗುವ ಗೋಕುಲಾಷ್ಠಮಿ ಹಾಗೂ ಜನ್ಮಕಾಳಾ, ತೊಟ್ಟಿಲು ಪೂಜೆ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತಿದ್ದು, ದಿ. 23 ರಂದು ಮುಕ್ತ ಭಜನಾ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಹತ್ತರಗಿ ಗ್ರಾ.ಪಂ. ಅಧ್ಯಕ್ಷ ಮಹಾದೇವ ಪಟೋಳಿಯವರು ಆಗಮಿಸಿ ಮಾತನಾಡುತ್ತ ಶ್ರೀಮಠದ ಅಭಿವೃದ್ದಿಗೆ ನಾನು ವೈಯಕ್ತಿಕವಾಗಿ ಹಾಗೂ ನಮ್ಮ ಗ್ರಾಮ ಪಂಚಾಯತ ವತಿಯಿಂದ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಪುರಾತನ ಕಾಲದ ಜಾಗೃತ ಸ್ಥಾನವಾದ ಈ ಕ್ಷೇತ್ರಕ್ಕೆ ಯಾವತ್ತು ನಮ್ಮ ಸೇವೆ ಇದ್ದೇ ಇರುತ್ತದೆ ಜೊತೆಗೆ ಹತ್ತರಗಿಯಲ್ಲಿರುವ ಜಾಂಬುತೀರ್ಥದ ಪಕ್ಕದಲ್ಲಿ ಸುಮಾರು 800 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಶ್ರೀ ದತ್ತಪೀಠವನ್ನು ಅಭಿವೃದ್ದಿ ಪಡಿಸಿ ಪುಣ್ಯಕ್ಷೇತ್ರವನ್ನಾಗಿ ಮಾಡುವದಾಗಿ ಭರವಸೆ ನೀಡಿದರು.

ಪ್ರಾರಂಭದಲ್ಲಿ ಶ್ರೀಮಠದ ಪೂಜ್ಯರಾದ ಆನಂದ ಮಹಾರಾಜ ಗೋಸಾವೆಯವರು ಪರಮಪೂಜ್ಯ ಹರಿಕಾಕಾ ಅವರ ಭಾವಚಿತ್ರ ಮತ್ತು ಸಂಗೀತವಾದ್ಯಗಳನ್ನು ಪೂಜಿಸುವದರ ಜೊತೆಗೆ ಜ್ಯೋತಿ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅದರಂತೆ ಸ್ಥಳೀಯ ಸಿಇಎಸ್ ಕಾಲೇಜಿನ ಪ್ರಾಚಾಂiÀರ್i ಪಿ.ಬಿ. ಅವಲಕ್ಕಿ ಶ್ರೀಮಠದ ಚರಿತ್ರೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಗೋಪಾಲ ಚಿಪಣಿ, ಸುನೀಲ ದೇಸಾಯಿ, ತಂಡಗಳನ್ನು ಸ್ವಾಗಿಸಿ ಸ್ಪರ್ದೇಯ ನಿಯಮವನ್ನು ಸೂಚಿಸಿದರು. ಸ್ಪರ್ದೇಗಳಲ್ಲಿ ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ 18 ಕಲಾತಂಡಗಳು ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಹಾಗೂ ಉತ್ತಮ ಕಲಾವಿದರಿಗೆ ವಿಶೇಷ ವೈಯಕ್ತಿಕ ಬಹುಮಾನ ನೀಡಲಾಯಿತು. ಸ್ಪರ್ದೇಯಲ್ಲಿ ವಿಜೇತರಾದ ತಂಡಗಳಿಗೆ ಸೂಕ್ತ ಬಹುಮಾನ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here