ಭಕ್ತರ ಕಾಮಧೇನು ಋಗ್ವೇದಿ ಮಠದ ಪೂಜ್ಯ ಹರಿಕಾಕಾ ಗೋಸಾವೆ

0
32

ಭರತಖಂಡವು ಅಲೌಕಿಕ ಜೀವನವನ್ನ ಮರೆದೆ ಯೋಗಿಗಳ, ತ್ಯಾಗಿಗಳ, ಸಂತವೆರೇಣ್ಯರ ತವರು ದೇಶ. ಮನೆ-ಮಠಗಳನ್ನು ತ್ಯಜಿಸಿ ಆದ್ಯಾತ್ಮವೇ ಜೀವನ ಎಂದು ಬಗೆದು ಅದರಲ್ಲಿಯೇ ಸಿದ್ದಿಯನ್ನು ಪಡೆದವರೆಲ್ಲ ಭಾರತದ ಭವಿಯಲ್ಲಿಯೇ ಜನಿಸಿ, ಬಾಳಿ ಬೆಳದಿದ್ದಾರೆ. ತಮ್ಮ ಜೀವನವನ್ನೇ ಮುಡುಪಿಟ್ಟು ಅನ್ಯರ ಹಿತಚಿಂತನೆಯನ್ನೇ ಉಸಿರಾಗಿಸಿ ಸಾಮಾಜಿಕ ಪ್ರೀತಿ, ಅದರ ಹಾಗೂ ಪೂಜ್ಯತೆಯ ಮನ್ನಣೆ ಪಡೆದ ಸಿದ್ದಯೋಗಿಗಳಲ್ಲಿ ಹತ್ತರಗಿಯ ಪೂಜ್ಯ ಹರಿಕಾಕಾ ಅವರೂ ಒಬ್ಬರು. ಸಂಕಟದಲ್ಲಿ ನಲುಗುತ್ತಿರುವ ಭಕ್ತರ ಉದ್ದಾರಕ್ಕೆ ಸದಾವಕಾಲ ಸಿದ್ದವಾಗಿರುವ, ದುಃಕಿಗಳ ಕಣ್ಣೀರೊರೆಸುವ ತವಕದ ಹರಿಕಾಕಾ ಅವರ ಬಗ್ಗೆ ನಾವು ಅರಿತಷ್ಟೂ ಕಡಿಮೆ. ಇವರು ತಮ್ಮನ್ನು ನಂಬಿ ಬಂದವರ ಅಳಲನ್ನು ಸ್ಪರ್ಶಮಾತ್ರದಿಂದ ದೂರಾಗಿಸುತ್ತಿದ್ದರೆಂದರೆ ಅತಿಶಯೋಕ್ತಿಯಲ್ಲ. ಇವರು ವಾಕ್ಸಿದ್ದಿಯನ್ನು ಪಡೆದಂಥ ಮಹಾಯೋಗಿ, ಅವರಿಗೆ ಜನ್ಮಭೂಮಿಯೆನಿಸಿ ಪಾವನ ನೆಲವೆಂಬ ಭಾಗ್ಯವನ್ನು ಪಡೆದ ಹಳ್ಳಿ ಜರಳಿ ಗ್ರಾಮ.

ಜರಳಿ ಒಂದು ಚಿಕ್ಕ ಹಳ್ಳಿ. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿ, ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನಲ್ಲಿಯ ಒಂದು ಒಕ್ಕಲು ಹಳ್ಳಿ. ನಿಸರ್ಗರಮಣೀಯ ಹಸಿರುವನಸಿರಿಯನ್ನು ಸೀಳಿಕೊಂಡು ಹರಿವ ಹಿರಣ್ಯಕೇಸಿಯ ದಡದಲ್ಲಿರುವ ಪುಣ್ಯಗ್ರಾಮ. ಜರಳಿಯ ಸಮಿಫದಲ್ಲೇ ಸುಮಾರು ಆಲ್ಕು ಮೈಲಿಗಳ ಅಮತರದಲ್ಲಿ ಸಮರ್ಥ ರಾಮದಾಸರಿಂದ ಪ್ರತಿಷ್ಠಾಪಿಸಲಾದ ಹನ್ನೊಂದು ಮಾರುತಿ ಮಂದಿರದಲ್ಲಿ ಒಂದನ್ನು ಪಾಲ್ಗುಣ ಸುದ್ದ ದ್ವೀತೀಯಾದಂದು ಅತಿ ವಿಜೃಂಬಣೆಯಿಂದ “ಭೀಮೋತ್ಸವ” ನಡೆಯುತ್ತದೆ. ಆ ಪುಣ್ಯಗ್ರಾಮದ ಸುಳಿಗಾಳಿ ಜರಳಿಯ ಗ್ರಾದವರೆಗೂ ಬೀಸಿ ಹಿತವಪ್ಪುವಂತೆ ಮಾಡುತ್ತದೆ.

ಹಿರಣ್ಯಕೇಶಿಯ ದಡದಲ್ಲಿ ಕಲ್ಲೇಶ್ವರ ಮತ್ತು ಕಮಲೇಶ್ವರ ಎಂಬ ಎರಡು ಭವ್ಯ ಮಂದಿರಗಳಿದ್ದು, ಅವುಗಳಲ್ಲಿ ರಾಮ-ಸೀತೆ ಹಾಗೂ ಲಕ್ಷ್ಮಣರ ಸುಂದರ ಮೂರ್ತಿಗಳು ವಿರಾಜಮಾನವರಾಗಿರುತ್ತವೆ. ಈ ಎರಡೂ ಮಂದಿರಗಳ ಅಂಗಳದಲ್ಲಿ ಎರಡು ಬೃಹದಾಕಾರದ ಅಶ್ವತ್ಥ ವೃಕ್ಷಗಳಿವೆ. ಈ ವೃಕ್ಷದ ತಂಪಾದ ನೆರಳಿನಲ್ಲಿ ಯಾತ್ರಿಕರು ವಿಶ್ರಮಿಸಿ ತಮ್ಮ ಮನದ, ಜೀವನದ ದುಗುಡ-ದುಮ್ಮಾನಗಳನ್ನು ಮರೆತು ದುಣಿವಾರಿಸಿಕೊಳ್ಳುತ್ತಾರೆ. ಈ ಮಂದಿಗಳ ಗಾವುದ ದೂರದಲ್ಲಿ ಊರ ಅಗಸೆ ಬಾಗಿಲು. ಅದನ್ನು ದಾಟಿ ಒಳಹೊಕ್ಕರೆ ಗ್ರಾಮಪ್ರವೇಶಕ್ಕೆ ಮೊದಲ ಸಿಗುವುದೇ ಗೋಪಾಳಭಟ್ಟರ ಮನೆ.

ಹಿರಿಯರಿಂದಲೂ ಅನುವಂಶಿಕವಾಗಿ ಬಂದ ಭಡಜಿ ವ್ಯವಸಾಯವನ್ನು ರೀತಿ ರಿವಾಜುಗಳನ್ನು ಚಾಚೂತಪ್ಪದೆ ಶ್ರದ್ದಾನುರಾಗದಿಂದ ಸುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ನಡೆಸಿಕೊಂಡು ಬಂದವರು ಗೋಪಾಳಭಟ್ಟರು. ಗೋಪಾಳಭಟ್ಟರು ವೇದ-ವಿದ್ಯಾ ಪಾರಂಗತರಾಗಿದ್ದರಲ್ಲದೆ, ಪೌರೋಹಿತ್ಯದಲ್ಲಿ ಪರಿಣಿತರಾಗಿದ್ದರಿಂದ ಸುತ್ತಲಿನ ಗ್ರಾಮಗಳಲ್ಲಿ ಆದರನೀಯರೆಸಿ ತಮ್ಮ ಪ್ರತಿಷ್ಠೆಯನ್ನು ಮರೆದವರು. ಇದನ್ನು ಈಗಿನ ಆನಂದ ಮಹಾರಾಜ ಗೋಸಾವೆಯವರು ಋಗ್ವೇದಿ ಮಠದ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವದೊಂದು ವಿಶೇಷ ಎಂದು ಹೇಳಲು ತಪ್ಪಾಗಲಾರದು. -ಗೋಪಾಲ ಚಿಪಣಿ , ಯಮಕನಮರಡಿ.

LEAVE A REPLY

Please enter your comment!
Please enter your name here