ಇಂಟ್ಯಾಕ್ ಸಂಯೋಜಕರಾಗಿ ಡಾ. ಜಿನದತ್ತ ದೇಸಾಯಿ

0
39

ಬೆಳಗಾವಿ,ಆ.24- ಬೆಳಗಾವಿ ವಿಭಾಗದ ಇಂಟ್ಯಾಕ್ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರನ್ನು ಸಂಯೋಜಕರಾಗಿ ಪುನರಾಯ್ಕೆ ಮಾಡಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಜೋಗ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಂಟ್ಯಾಕ್ ಸಂಸ್ಥೆಯ ಡಾ. ದೇಸಾಯಿಯವರ ನೇತೃತ್ವದಲ್ಲಿಯ ಸೇವೆಯನ್ನು ಗುರುತಿಸಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗಾಗಿ ನಿನ್ನೆ ಸೇರಿದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತೆಂದು ತಿಳಿಸಿದ್ದಾರೆ. ಈ 87 ರ ವಯಸ್ಸಿನಲ್ಲಿ ಸೇವಾಕಾಂಕ್ಷಿಗಳಾದ ಡಾ. ದೇಸಾಯಿಯವರ ಉತ್ಸಾಹವನ್ನು ಸಂಸ್ಥೆ ಶ್ಲಾಘಿಸಿದೆ.

LEAVE A REPLY

Please enter your comment!
Please enter your name here