ವಿಶ್ವ ಜಾನಪದ ದಿನಾಚರಣೆ ನಿಮಿತ್ತ ಉಪನ್ಯಾಸ

0
37

ಗೋಕಾಕ,ಆ.24- ಶ್ರೀ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ದಿನಾಂಕ: 28-08-2019 ರಂದು ಸಾಯಂಕಾಲ 6:00 ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತು ಹಾಗು ಶ್ರೀ ಶಂಕರಲಿಂಗ ಟ್ರಸ್ಟ್ ಗೋಕಾಕ ಇವರ ಆಶ್ರಯದಲ್ಲಿ ಉಪನ್ಯಾಸ ರಂಗ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ದುಂಡಯ್ಯ ಮಹಾಸ್ವಾಮಿಗಳು ದಿವ್ಯ ಸನ್ನಿಧಾನದಲ್ಲಿ ಡಾ|| ರಾಜಶೇಖರ ಗುಣಕಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿ ಉಪನ್ಯಾಸಕರಾಗಿ ಡಾ|| ಶಕುಂತಲಾ ಕಾಮೋಜಿ ವಿಶೇಷ ಉಪನ್ಯಾಸ ನೀಡುವರು. ಬೆಳಗಾವಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ.ಕೆ.ನಾವಲಗಿಯವರು ಪ್ರಾಸ್ತಾವಿಕ ನುಡಿಗಳನ್ನಾಡುವರು.

ಕಾರ್ಯಕ್ರಮದಲ್ಲಿ ಗೋಕಾಕ ತಾಲ್ಲೂಕ ಕ.ಜಾ.ಪ. ಅಧ್ಯಕ್ಷರಾದ ಮಲ್ಲಿಕಾರ್ಜುನ ಈಟಿ, ಬಣಗಾರ ಸಮಾಜದ ಹರಿಯರಾದ ಬಿ.ಎಮ್.ಕುಬಸದ ಹಾಗು ರಾಮದರ್ಗು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ರಾಜು ಎನ್. ಕಂಬಾರ ಮುಂತಾದವರು ಉಪಸ್ಥಿತರಿರುವರು. ಆಸಕ್ತರು ಆಗಮಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here