ಬಿ.ವ್ಹಿ.ವ್ಹಿ ಸಂಘಕ್ಕೆ ರೂ. 25 ಲಕ್ಷ ದೇಣಿಗೆ

0
30

ಬಾಗಲಕೋಟ,ಆ.24- ಬೆಂಗಳೂರಿನ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಭಿವೃದ್ದಿ ಸಂಸ್ಥೆ(ರಿ) ಯು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮದಲ್ಲಿರುವ ಬಾಗಲಕೋಟೆಯ ಬಿ.ವ್ಹಿ.ವ್ಹಿ. ಸಂಘದ ಶ್ರೀ ರಾಮಕೃಷ್ಣ ಪರಮಹಂಸ ಪದವಿ ಪೂರ್ವ ಮಹಾವಿದ್ಯಾಲಯದ ಅಭಿವೃದ್ಧಿಗೋಸ್ಕರ ರೂ. 25,36,023/- ಗಳ ದೇಣಿಗೆ ನೀಡಿದೆ.

ಬೆಂಗಳೂರಿನ ಸದರಿ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜಶೇಖರ ಕರಿಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಇಂದು ಬಾಗಲಕೋಟೆಯ ಬಿ.ವ್ಹಿ.ವ್ಹಿ. ಸಂಘದ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠ ಅವರನ್ನು ಭೇಟಿಯಾಗಿ ಚೆಕ್‍ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಡಾ. ವೀರಪ್ಪ ಯರಗಣವಿ, ಬಿ.ವ್ಹಿ.ವ್ಹಿ. ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀ ಅಶೋಕ ಎಂ. ಸಜ್ಜನ(ಬೇವೂರ) ಹಾಗೂ ಶ್ರೀಶೈಲ ಪಾರ್ಶಿಯವರ ಮುಂತಾದವರು ಉಪಸ್ಥಿತರಿದ್ದರು.

ದೇಣಿಗೆ ನೀಡಿದ ಬೆಂಗಳೂರಿನ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಭಿವೃದ್ದಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಬಿ.ವ್ಹಿ.ವ್ಹಿ. ಸಂಘದ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎನ್. ಅಥಣಿ ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here