ಬೆಳಗಾವಿ

ಕೃತಿ ಬಿಡುಗಡೆ ಸಮಾರಂಭ ಇಂದು

ಬೆಳಗಾವಿ,ಆ.24- ಹೊಂಬೆಳಕು ಸಾಂಸ್ಕøತಿಕ ಸಂಘದ ವತಿಯಿಂದ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಹಾಗು ಸು.ಕೃಷ್ಣ ನೆಲ್ಲಿ ರವರ ಬೆಳಗಾವಿ ಸೆಕೆಂಡ್ ಗೇಟ್ ಕೃತಿ ಬಿಡುಗಡೆ ಸಮಾರಂಭ ಚನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಅ 25 ರಂದು ಮುಂಜಾನೆ 10 ಕ್ಕೆ ಜರುಗಲಿದೆ.

ಅಧ್ಯಕ್ಷತೆಯನ್ನು ಸಾಹಿತಿ ಸ.ರಾ.ಸುಳಕೂಡೆ ವಹಿಸಲಿದ್ದಾರೆ. ಹಂಪಿ ಕವಿವಿ ಪ್ರಸಾರಾಂಗ ಸಲಹಾಗಾರ ಡಾ. ಸಿದ್ದಣ್ಣ ಉತ್ನಾಳ ಇವರಿಗೆ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ. ಧಾರವಾಡ ನಿವೃತ್ತ ಪ್ರಾಚಾರ್ಯ ಜಿ.ಎ.ತಿಗಡಿ, ಕಬಾವಿ ಅಕಾಡೆಮಿ ನಿಕಪೂರ್ವ ರಾಜ್ಯ ಸದಸ್ಯ ಬಸವರಾಜ ಗಾರ್ಗಿ ಅತಿಥಿ ಸ್ಥಾನ ವಹಿಸಲಿದ್ದಾರೆ. ಪತ್ರಕರ್ತರು ಹಾಗು ಸಾಹಿತಿಗಳು ಎಲ್.ಎಸ್.ಶಾಸ್ರ್ರಿ ಕೃತಿ ಬಿಡುಗಡೆ ಮಾಡುವರು. ನಿವೃತ್ತ ಗಣಿತ ಪ್ರಾಧ್ಯಾಪಕ ಪ್ರೋ ಶಾಂತಾರಾಮ ಹೆಗಡೆ ಕೃತಿ ಪರಿಚಯ ಮಾಡುವರು ಹಾಗು ನಿವೃತ್ತ ಕನ್ನಡ ಪ್ರಾಧ್ಯಪಕಿಯರಾದ ಶಶಿಕಲಾ ಪಾವಶೆ ಕೃತಿ ಅವಲೋಕನ ಮಾಡುವರು. ಎಂದು ಸಂಘದ ಪ್ರದಾನ ಕಾರ್ಯದರ್ಶಿ ಉಮೇಶ ಹಾರುಗೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: