ಮುಧೋಳ

ಪ್ರವಾಹಕ್ಕೆ ತುತ್ತಾದ ಮನೆಗಳ ಸರ್ವೆ ಕಾರ್ಯ

ಮುಧೋಳ,ಆ.24- ಕುಂಬಾರ ಗಲ್ಲಿಯಲ್ಲಿ ಕಾಶಿಬಾಯಿ ಕೋರೆಗಳ ಅವರ ತಂಡ ಸರ್ವೆ ಕಾರ್ಯದಲ್ಲಿ ತೊಡಗಿದೆ, ಸರಕಾರದ ಆದೇಶದಂತೆ ಪರಿಹಾರ, 15%ರಿಂದ 25% ಹಾನಿಯಾದ ಮನೆಗಳಿಗೆ ತಲಾ ರೂ. 25 ಸಾವಿರ ನೀಡಲಾಗುವುದು. 25%ರಿಂದ 75% ಹಾನಿಯಾದ ಮನೆಗಳಿಗೆ ತಲಾ ರೂ.1 ಲಕ್ಷ ದ ವರೆಗೆ ಪರಿಹಾರ ನೀಡಲಾಗುವುದು , ಆದ್ದರಿಂದ ಸ್ಥಾನಿಕವಾಗಿ ಮನೆಗಳಿಗೆ ಹೋಗಿ ಫೆÇೀಟೋ ತೆಗೆದು ವರದಿಯನ್ನು ಮಾಡುತ್ತಿದ್ದಾರೆ, ಪ್ರವಾಹಕ್ಕೆ ತುತ್ತಾದ ಮನೆಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮನೆಯ ಮಾಲೀಕರಲ್ಲಿ ವಿನಮ್ರತೆಯಿಂದ ಕೇಳಿ ಪಡೆದುಕೊಳ್ಳುತ್ತಿದ್ದಾರೆ, ಮಾನವೀಯತೆಯ ದೃಷ್ಟಿಯಿಂದ ಎಲ್ಲ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಕಾಶಿಬಾಯಿ ಕೊರೆಗೋಳ ಮಾತನಾಡಿ ಸರಕಾರದ ಆದೇಶದಂತೆ ಪ್ರವಾಹ ಪೀಡಿತ ಎಲ್ಲ ಮನೆಗಳಿಗೆ ಭೇಟಿ ನೀಡಿ ಶಾಂತಿ ರೀತಿಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದ್ದೆವೆ,ಸಂತ್ರಸ್ತರು ತಮ್ಮ ಅಳಲುಗಳನ್ನು ನಮ್ಮಲ್ಲಿ ತೋಡಿಕೊಳ್ಳುತ್ತಿದ್ದಾರೆ ಅವರಿಗೆ ಶಾಂತತೆಯನ್ನು ಹೇಳುತ್ತಿದ್ದೇವೆ, ಬಾಧಿತ ಮನೆಗಳ ಒಳಗೆ ಹೋಗಿ ಕೂಲಂಕುಷವಾಗಿ ಮನೆಗಳನ್ನು ನೋಡಿ ಫೆÇೀಟೋ ತೆಗೆದು ವಸ್ತು ನಿಷ್ಠೆ ವರದಿ ಮಾಡುತ್ತಿದ್ದೆವೆ, ಯಾವ ಮನೆ ಕೂಡ ಸರ್ವೆ ಕಾರ್ಯದಿಂದ ಉಳಿಯಬಾರದು, ಓಣಿಯೆಲ್ಲ ಸುತ್ತುವರಿದು ಸರ್ವೆ ಮಾಡುತ್ತಿದ್ದೆವೆ, ಒಣಿಯ ಜನರು ನಮಗೆ ತುಂಬಾ ಸಹಕರಿಸುತ್ತಿದ್ದಾರೆ, ನಮ್ಮ ತಂಡ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: