ಎಸ್.ಯು.ಸಿ.ಐ, ಎಐಡಿವೈಓ ಸಂಘಟನೆಗಳಿಂದ ಆಹಾರ ಧಾನ್ಯ ವಿತರಣೆ

0
34

ಗೋಕಾಕ,ಆ.24- ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದ ಗೋಕಾಕ ಪಟ್ಟಣ, ರಾಯಭಾಗ ತಾಲ್ಲೂಕಿನ ದಿಗ್ಗಿವಾಡ, ಕೆಮಲಾಪುರ ಗ್ರಾಮಗಳ ಜನರಿಗೆ ಇಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಅಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಸಂಘಟನೆಗಳಿಂದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ್ದ ಸುಮಾರು 90 ಕ್ವಿಂಟಾಲ್ ಅಕ್ಕಿ, 10 ಕ್ವಿಂಟಾಲ್ ಒಣ ಮೆಣಸಿನಕಾಯಿ, 5 ಕ್ವಿಂಟಾಲ್ ತೊಗರಿ ಬೇಳೆ ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು.

ಎಸ್.ಯು.ಸಿ.ಐ(ಸಿ) ಪಕ್ಷದ ಸದಸ್ಯರು ಹಾಗೂ ಎಐಡಿವೈಓ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ್ ಗೋಕಾಕ ಪಟ್ಟಣದ ಕಾಡಸಿದ್ದೇಶ್ವರ ಮಠದಲ್ಲಿ ಆಹಾರ ಧಾನ್ಯಗಳ ವಿತರಣೆಗೆ ಚಾಲನೆ ನೀಡಿ ನೊಂದ ಜನರಿಗೆ ಸಾಂತ್ವನದ ಮಾತುಗಳನ್ನು ಹೇಳಿದರು. ಇದು ಅತ್ಯಂತ ಕಳವಳಕಾರಿಯಾದ ಘಟನೆಯಾಗಿದೆ. ಇಂತಹ ವಿಕೋಪದ ಸಂದರ್ಭದಲ್ಲಿ ನಮ್ಮ ಸಂಘಟನೆಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಿದ್ದ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಸೂರು ಕಳೆದುಕೊಂಡವರು ಅಕ್ಷರಶಃ ಇಂದಿಗೂ ಬೀದಿಯಲ್ಲಿದ್ದಾರೆ. ಈ ಅನಾಹುತದಿಂದ ನಷ್ಟಕ್ಕೊಳಗಾದ ಕುಟುಂಬಗಳ ಮತ್ತು ಮನೆ ಕಳೆದುಕೊಂಡವರ ಸಮೀಕ್ಷೆ ಕಾರ್ಯವನ್ನು ಕೂಡಲೇ ಕೈಗೊಂಡು ಮನೆ ಕಟ್ಟಿಕೊಳ್ಳಲು ಪರಿಹಾರವನ್ನು ಶಿಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಹಿರಿಯ ಪತ್ರಕರ್ತರಾದ ವೆಂಕನಗೌಡ ಪಾಟೀಲ್ ಸಂಘಟನಾಕಾರರಾದ ಲಕ್ಕಪ್ಪ ಬಿಜ್ಜನ್ನವರ, ರಮೇಶ ಹೊಸಮನಿ, ಭವಾನಿಶಂಕರ, ಯರ್ರಿಸ್ವಾಮಿ, ಸ್ವಯಂಸೇವಕರಾದ ನೀಲಕಂಠ ಗೌಡರ್, ಶಂಕರ್ ಗೌಡರ್, ಸಿದ್ದರೂಡ ಪಾಟೀಲ್, ಸಿದ್ದನಗೌಡ ಪಾಟೀಲ್, ನಾಗರಾಜ ಅಂತರಗಟ್ಟಿ, ಈರಣ್ಣ ಹೆಜ್ಜೆಗಾರ, ವಿಠಲ್ ಆನೆಗೋಳ ಮುಂತಾದವರು ವಿತರಣೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here