ವಿಷಯ ತಿಳಿದು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಿ

0
46

ಗದಗ,ಆ.24- ವಿದ್ಯಾರ್ಥಿಗಳು ಯಾವುದೇ ವಿಷಯವಿರಲಿ ಅದರಲ್ಲಿ ಆಸಕ್ತಿಯಿಂದ ಅಭ್ಯಾಸ ಮಾಡಲು, ತಿಳಿಯದುದನ್ನು ಪ್ರಶ್ನೆ ಮಾಡುವ ಮೂಲಕ ತಿಳಿದುಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕು ಪ್ರರಿಶ್ರಮದಿಂದ ಅಭ್ಯಾಸ ಮಾಡಿ ಪರೀಕ್ಷೆಗೆ ತಯಾರಾಗಬೇಕು ಎಂದು  ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ನುಡಿದರು.

ಗದಗ ಜಿಲ್ಲಾ ಪಂಚಾಯತ,ಸಾರ್ವಜನಿಕ ಶಿಕ್ಷಣ ಇಲಾಖೆ, ಗದಗ ಶಹರ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಹಾಗೂ ಗದುಗಿನ ಸಿಡಿಓ ಜೈನ್ ಶಿಕ್ಷಣ ಸಂಸ್ಥೆಯ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ ಭಾಷೆ ಕುರಿತು ನೇರ ಪೆÇ?ನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರ. ಗದಗ ಜಿಲ್ಲೆಯು ಶಿಕ್ಷಣ ಜೊತೆಗೆ ಎಲ್ಲಾ ರಂಗಗಳಲ್ಲೂ ಮುಂದಾಗಲು ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸವು ಒಂದು ಚೈತನ್ಯದಾಯಿ ಚಟುವಟಿಕೆಯಾಗುವಂತೆ ಮಾಡಿ ಹೊಸ ವಾತಾವರಣ ಮೂಡಿಸಬೇಕು. ಉತ್ತಮ ಶಿಕ್ಷಣ ಗುಣಮಟ್ಟದ ಜೊತೆಗೆ ಹೆಚ್ಚು ಅಂಕಗಳನ್ನು ಗಳಿಸುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಎಸ್.ಪಿ.ಬಳಿಗಾರ ತಿಳಿಸಿದರು.

ಗದಗ ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ವಿದ್ಯಾರ್ಥಿಗಳು ಗಮನವಿಟ್ಟು ಪಾಠ ಕಲಿಯಬೇಕು, ಶಿಕ್ಷಕರ ಜೊತೆಗೆ ಮುಕ್ತವಾಗಿ ಮಾತನಾಡಿ ಸಂಕೋಚಪಡದೆ ವಿಷಯಕ್ಕೆ ಸಂಬಂದ ಪಟ್ಟ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ತಿಳಿದುಕೊಳ್ಳಬೇಕು. ಶಿಕ್ಷಣವೂ ಸೇರಿದಂತೆ ಗದಗ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಒಳ್ಳೆಯ ಪ್ರಗತಿ ಸಾಧಿಸಬೇಕು. ಅದಕ್ಕಾಗಿ ನಮ್ಮ ನಮ್ಮ ಕೇತ್ರಗಳÀಲ್ಲಿ ನಾವು ಒಳ್ಳೆಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಇದನ್ನು ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಓದುವ ಸಂದರ್ಭದಲ್ಲಿ ಪೆÇ?ಷಕರು ಕೂಡಾ ಮನೆಯಲ್ಲಿ ಶಾಂತ ವಾತಾವರಣ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ವಿಷಯ ಅಧ್ಯಯನ ಜೊತೆ ಪರೀಕ್ಷೆಗಳಲ್ಲಿನ ಪ್ರಶ್ನೆಗಳ ಕುರಿತು ಅರಿಯಲು ಗದಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ಅವರು ಎಲ್ಲ ವಿಷಯಗಳ ಕುರಿತು ಜಿಲ್ಲೆಯ ಎಲ್ಲ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನೇರ ಫೆÇೀನ್ ಇನ್ ಕಾರ್ಯಕ್ರಮ ಎರ್ಪಡಿಸುತ್ತಿರುವುದುಇದು ಒಂದು ಉತ್ತಮ ಹೆಜ್ಜೆಯಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಮಂಜುನಾಥ ಚವ್ಹಾಣ ನುಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರು ಪ್ರಾಸ್ತವಿಕವಾಗಿ ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಗಳು ಓದುವುದು ಅಷ್ಟೇ ಅಲ್ಲದೇ ಧೈರ್ಯವಾಗಿ ಮಾತನಾಡುವ ಶೈಲಿಯನ್ನ ಬೆಳೆಸಿಕೊಳ್ಳಬೇಕು. ನೇರ ಪೆÇ?ನ್ ಇನ್ ಕಾರ್ಯಕ್ರಮವು ಪ್ರತಿ ವಿಷಯದ ಕುರಿತು 18 ವಾರಗಳ ಕಾಲ ಸಾಯಂಕಾಲ 6ರಿಂದ 8 ರವರೆಗೆ ನಡೆಯುತ್ತದೆ ಎಂದರು.

ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್ ಕೆಳದಿಮಠ, ಶಿಕ್ಷಣಾಧಿಕಾರಿ ಮಂಗಳಾ ತಪೆÇ?ಸ್ಕರ, ಸಿಡಿಒ ಜೈನ್ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಮ್.ಬಿ.ಹಿರೇಮಠ, ಸಂಪನ್ಮೂಲಗಳ ತಂಡದ ಶಿಕ್ಷಕರು ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದನ್ವಯ ಸಾಯಂಕಾಲ 6.00 ರಿಂದ 8.00ವರೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆಂಗ್ಲ ವಿಷಯದ ಕುರಿತ ನೇರ ಫೆÇ?ನ್ ಇನ್ ಕಾರ್ಯಕ್ರಮದಲ್ಲಿ 8 ಜನ ಸಂಪನ್ಮೂಲ ವ್ಯಕ್ತಿ ಗಳು ಹಾಜರಿದ್ದರು. 100 ಕ್ಕೂ ಹೆಚ್ಚು ಮಕ್ಕಳ ದೂರವಾಣಿಗಳನ್ನು ಸ್ವೀಕರಿಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು.

LEAVE A REPLY

Please enter your comment!
Please enter your name here