ಗದಗ್

ಅರುಣೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ

ಗದಗ,ಆ.24- ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಮಹತ್ತರದ್ದಾಗಿದೆ ಎಂದು ಶಾಲೆಯ ಅಧ್ಯಕ್ಷ ಪ್ರೊ. ತುಕಾರಾಮಸಿಂಗ್ ಜಮಾದಾರ ಅವರು ಹೇಳಿದರು.

ಶಾಲೆ, ಪಾಲಕರು ಹಾಗೂ ತಜ್ಞ ವೈದ್ಯರು ಸೇರಿ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಸಂಪೂರ್ಣ ಪುನಶ್ಚೇತನ ಮಾಡಲು ಸಾಧ್ಯ. ತಾವು ನಮ್ಮ ಕರೆಗೆ ಸ್ಪಂದಿಸಿ, ಮಕ್ಕಳ ತಯಾರಿಗೆ ಹೆಚ್ಚು ಶ್ರಮಿಸಿದ್ದೀರಾ, ನಿಮ್ಮ ಹುಮ್ಮಸ್ಸು ಕುಗ್ಗಬಾರದು” ಎಂದು ಪ್ರೆರೇಪಿಸಿದರು.

ಸೇವಾ ಭಾರತಿ ಟ್ರಸ್ಟ್‍ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ “ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಮಕ್ಕಳು ಕೃಷ್ಣ ಹಾಗೂ ರಾಧಾ ವೇಷಭೂಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಿ.” ಎಂಬ ನಾಣ್ಣುಡಿಯ ತಾತ್ಪರತೆಯಂತೆ, ಅವಕಾಶ ಕೊಟ್ಟರೆ ನಾವೂ ನಮ್ಮ ಕೌಶಲ್ಯ ತೋರಿಸಬಲ್ಲೆವು ಎನ್ನುವ ಸತ್ಯವನ್ನು ಸಮಾಜಕ್ಕೆ ತೋರಿಸಿಟ್ಟಿದ್ದಾರೆ ಎಂದು ಹೇಳಿದರು.

ಶಾಲಾ ಸಮಿತಿಯ ಸದಸ್ಯ ಲುಕ್ಕಣ್‍ಸಾ ರಾಜೋಳಿ ಅವರು ಮಾತನಾಡಿ, ವಿಶೇಷ ಮಕ್ಕಳಿಗೆ ವಿವಿಧ ಪಠ್ಯ ಹಾಗೂ ಪಠ್ಠೇತರ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಮಕ್ಕಳಿಗೆ ಸಮುದಾಯದ ಮುಖ್ಯ ವಾಹಿನಿಯಲ್ಲಿ ಬೆರೆಯುವಂತೆ ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಉತ್ತಮವಾಗಿ ಅಲಂಕಾರ ಮಾಡಿಕೊಂಡು, ಹಸನ್ಮುಖರಾಗಿ ಶಾಲೆಗೆ ಆಗಮಿಸಿದ್ದು ನೋಡಲು ಎರಡು ಕಣ್ಣು ಸಾಲದಾಗಿತ್ತು. ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ, ಆಸಕ್ತ ಗಂಡು ಮಕ್ಕಳು ಕೃಷ್ಣ ಹಾಗೂ ಹೆಣ್ಣು ಮಕ್ಕಳು ರಾಧಾ ವೇಷ ಭೂಷಣದಲ್ಲಿ ಜನಮನ ಸೆಳೆದರು.

ಶಾಲಾ ಮುಖ್ಯೋಪಾದ್ಯಾ ಮಲ್ಲಪ್ಪ ಹಕ್ಕಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಶಿಕ್ಷಕ ಜಗದೀಶ ಹಡಪದ, ಜಯಶ್ರೀ ಭಾವರೆ, ರೇವತಿ ಹಳಗತ್ತಿ, ರೇಣುಕಾ ದಾಸರ, ಮುತ್ತಣ್ಣ ಹಾಗೂ ಪಾಲಕರಾದ ಸಾವಿತ್ರಿ, ಗಿರಿಜಾ, ಶಶಿಕಲಾ ಹಾಳಕೇರಿ, ಶಾಂತಾ ಹಾಗೂ ಬಸವರಾಜ ಸಾಳೇರ, ನೂರಜಾನ್ ಹಾಗೂ ಮಾಬೂಸಾಬ ನಾಲಬಂದ, ಸರೋಜಾ, ವಸಂತಕುಮಾರ ಜಂಗಮನಿ, ಭಾರತಿ ಹನುಮಸಾಗರ, ಗಿರಿಜವ್ವ, ಸುರೇಖಾ ಭೋವಿ, ಯಾಸ್ಮೀನ್ ಸರಕಾವಸರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: