ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

0
37

ಗದಗ,ಆ.24- ಇಂದಿನ ದಿನಗಳಲ್ಲಿ ಸದ್ಭವನಾ ದಿನಾಚರಣೆಯನ್ನು ಆಚರಿಸುವುದು ತುಂಬಾ ಸತ್ಯಾರ್ಹ ಮತ್ತು ಸ್ವಾಗತಾರ್ಹವಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಬಿ.ಕೊಳವಿ ಅವರು ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಓSS ಮತ್ತು ಙಖಅ ಘಟಕಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸದ್ಭಾವನಾ ದಿನಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು ಭಾರತ ದೇಶವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದಲ್ಲದೆ ಮಾನವೀಯ ಧ್ಯೇಯ ಹೊಂದಿರುವುದು. ಜಾತಿ, ಮತ, ಪಂಥ, ವರ್ಗ ಭೇದವಿಲ್ಲದೆ ವಿವಿಧತೆಯಲ್ಲಿ ಏಕತೆಯನ್ನು ಅನೇಕತೆಯಲ್ಲಿ ಏಕತೆಯನ್ನು ಒಳಗೊಂಡ ಸಂಸ್ಕೃತಿ ಪರಂಪರೆ ನಮ್ಮದು. ವಿಶ್ವ ಭ್ರಾತೃತ್ವ ಭಾವದಿಂದ ಹೊಂದಿಕೊಂಡು ಬಾಳುವ ಸಾಮರಸ್ಯದ ಸಮಭಾವ ಭಾರತೀಯರದಾಗಿದೆ.

ಆದರೆ ಮನುಷ್ಯನಲ್ಲಿ ಮನೆಮಾಡಿರುವ ದ್ವೇಷ, ಅಸೂಯೆ, ಪೈಪೋಟಿಯ ಸ್ಪರ್ಧಾ ಮನೋಭಾವದಿಂದಾಗಿ ಸಮಾಜದಲ್ಲಿ ಅನೇಕ ರೀತಿಯ ಹಿಂಸಾಚಾರಗಳು, ದರೋಡೆ, ಕೊಲೆ-ಸುಲಿಗೆ-ದೌರ್ಜನ್ಯದಂತಹ ಸಮಾಜಘಾತುಕ ಅಹಿತಕರ ಘಟನೆಗಳು ಪ್ರತಿದಿನ ದೇಶದ ವಿವಿಧ ಕಡೆಗಳಲ್ಲಿ ಜರುಗುತ್ತಿರುವುದು ವಿಷಾಧದ ಸಂಗತಿಯಾಗಿದ್ದು ಮನುಕುಲವೇ ತಲೆತಗ್ಗಿಸುವಂತಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ನಮ್ಮಲ್ಲಿಯ ವೈರತ್ವವನ್ನು ಮರೆತು ಸ್ನೇಹಭಾವದಿಂದ ಸಮರಸತೆಯನ್ನು ಬಾಳುವ ವಾತಾವರಣವು ನಿರ್ಮಾಣವಾಗುವಂತೆ ಪ್ರಯತ್ನಿಸಬೇಕಾದದ್ದು ಅವಶ್ಯಕವಾಗಿದೆಯೆಂದು ಪ್ರಾಚಾರ್ಯ ಪ್ರೊ. ಎಂ.ಬಿ.ಕೊಳವಿ ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು

LEAVE A REPLY

Please enter your comment!
Please enter your name here