ಕಾರವಾರ

ಅಪಘಾತ ಮಾಡಿದ ಚಾಲಕನಿಗೆ ಜೈಲುಶಿಕ್ಷೆ

ಕಾರವಾರ,ಆ.24- ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬಳಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನಿಗೆ ಎರಡುವರೆ ವರ್ಷ ಜೈಲು ಹಾಗೂ ದಂಡವನ್ನು ಇಲ್ಲಿನ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾದೀಶ ವಿವೇಕ ಗಾಮೋಪಾಧ್ಯಾಯ ಆದೇಶ ನೀಡಿದ್ದಾರೆ.

ಕಳೆದ 2015ರ ಮೇ ತಿಂಗಳಲ್ಲಿ ತಾಲೂಕಿನ ಮಾಜಾಳಿಯ ನಚಕಿನಭಾಗ ಕ್ರಾಸ್ ಮಹಾರಾಷ್ಟ್ರ ಮೂಲಕ ವಾಹನ ಚಾಲಕ ಉಮರ್ ಅಹಮ್ಮದ್ ಅನ್ಸಾರಿ ಎನ್ನುವವರು ಶಾಲೆಗೆ ತೆರಳುತ್ತಿದ್ದ ಸಾನಿಕಾ ಚಂಡೇಕರ್ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದರು.

ಕಾರು ಗುದ್ದಿದ ಪರಿಣಾಮ ಬಾಲಕಿ ತೀವ್ರ ರಕ್ತಸ್ರಾವದಿಂದ ಸಾವನಪ್ಪಿದ್ದಳು. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ ವೃತ್ತ ನಿರೀಕ್ಷಕ ಅರುಣಕುಮಾರ ಕೋಳುರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಅಪರಾಧ ಸಾಭೀತಾಗಿದ್ದರಿಂದ ನ್ಯಾಯಾಲಯವೂ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ಎಸ್. ಬಿ. ಮುಲ್ಲಾ ವಾದ ಮಂಡಿಸಿದ್ದರು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: