ಧಾರವಾಡ

ಅರಣ್ಯಾಧಿಕಾರಿಗಳ ಜೇಷ್ಠತಾಪಟ್ಟಿ ಹಿಂಪಡೆಯಲು ಆಗ್ರಹ

ಧಾರವಾಡ,ಆ.24- ಅರಣ್ಯ ಇಲಾಖೆಯ ಸಿಬ್ಬಂದಿಗಳು ದಿನದ 24 ಘಂಟೆಯೂಅರಣ್ಯ ಸಂರಕ್ಷಣೆಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಈ ಪರಿಸ್ಥಿತಿಯಲ್ಲಿ ಧಾರವಾಡ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತರಾ-ತುರಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳ ಜೇಷ್ಟತಾ ಪಟ್ಟಿಯನ್ನು ಅಂತಿಮಗೊಳಿಸಿರುತ್ತಾರೆ. ಸುಮಾರು 20-30 ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿ ಅರಣ್ಯರಕ್ಷಕ ಹುದ್ದೆಯಿಂದಉಪವಲಯ ಅರಣ್ಯಾಧಿಕಾರಿಗಳಾಗಿ ಸ್ಥಾನಪನ್ನ ಮುಂಬಡ್ತಿ ಹೊಂದಿದ್ದರೂ ಸಹ ದಿನಾಂಕ:23-08-2019 ರಂದು ಪ್ರಕಟಿಸಿದ ಜೇಷ್ಟತಾ ಪಟ್ಟಿಯಲ್ಲಿ ಅಂಥವರ ಹೆಸರೇ ಇಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುವಂತಾಗಿದೆ.

ಇದರಿಂದ ಸೇವಾ ಜೇಷ್ಠತೆಯಲ್ಲಿ ಭಾರಿ ಅನ್ಯಾಯವಾಗಿರುತ್ತದೆ ಆದ್ದರಿಂದ ಮೇಲಾಧಿಕಾರಿಗಳು ಈ ಕೂಡಲೇ ಅಂತಿಮಗೊಳಿಸಿದ ಉಪವಲಯ ಅರಣ್ಯಾಧಿಕಾರಿಗಳ ದೋಷಪೂರಿತ ಜೇಷ್ಟತಾ ಪಟ್ಟಿಯನ್ನು ಹಿಂಪಡೆದು ನ್ಯಾಯಬದ್ಧ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸ ಬೇಕೇಂದು ಉಪವಲಯ ಅರಣ್ಯಾಧಿಕಾರಿಗಳ ಸಂಘ ಆಗ್ರಹಿಸಿದೆ. ಒಂದು ವೇಳೆ ಜೇಷ್ಟತಾ ಪಟ್ಟಿಯನ್ನು ಪುನರ್ ಪರಿಶಿಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ದಿನಾಂಕ:28-08-2019 ರಿಂದ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಎಲ್ಲ ಉಪವಲಯ ಅರಣ್ಯಾಧಿಕಾರಿಗಳು ಅನಿರ್ಧಷ್ಟ ಅವಧಿಯವರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: