ಇಂದು ‘ಜಗದ್ವಂದ್ಯ ಭಾರತಂ’ ಕೃತಿ ಬಿಡುಗಡೆ

0
32

ಧಾರವಾಡ,ಆ.24- ಬೆಂಗಳೂರಿನ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಸಾಹಿತಿ ಪ್ರೊ. ರಾಜಶೇಖರ ಮಠಪತಿ (ರಾಗಂ) ಅವರ ರಾಷ್ಟ್ರಧ್ವಜದ ರೋಚಕ ಕತೆಯನ್ನು ಒಳಗೊಂಡ ಕಾದಂಬರಿ ‘ಜಗದ್ವಂದ್ಯ ಭಾರತಂ’ ಕೃತಿಯ ಬಿಡುಗಡೆ ಹಾಗೂ ಅವಲೋಕನ ರವಿವಾರ (ಆಗಷ್ಟ-25) ಮುಂಜಾನೆ 10.30 ಗಂಟೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಜರುಗಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಕೃತಿ ಬಿಡುಗಡೆ ಮಾಡಲಿದ್ದು, ಹಿರಿಯ ಸಾಹಿತಿ ಪ್ರೊ. ರಾಮಚಂದ್ರ ಪಾಟೀಲ ಅಧ್ಯಕ್ಷತೆವಹಿಸುವರು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಕಾಯಾಧ್ಯಕ್ಷ ಬಸವರಾಜ ಆನೇಗುಂದಿ, ಉಪಾಧ್ಯಕ್ಷ ಮಹಾಂತೇಶ ಬೇತೂರಮಠ, ಹಿರಿಯ ರಂಗ ಕಲಾವಿದ ರಾಘವೇಂದ್ರ ರಾಮದುರ್ಗ ಹಾಗೂ ಲೇಖಕ ಮಾರ್ತಾಂಡಪ್ಪ ಕತ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು. ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಆಶಯ ನುಡಿ ಹಂಚಿಕೊಳ್ಳಲಿದ್ದು, ಸ್ನೇಹಿತರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಜಿ. ಮಠಪತಿ ಕೃತಿ ಕುರಿತು ಮಾತನಾಡುವರು.

ನಮ್ಮ ದೇಶದ ತಿರಂಗಾ ಭಾರತೀಯರೆಲ್ಲರ ಅಭಿಮಾನ. ಅದು ನಮ್ಮ ಸ್ವಾತಂತ್ರ್ಯ ಹಾಗೂ ಆತ್ಮೋನ್ನತಿಯ ಸಂಕೇತವಾಗಿ ಹಾರಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಕತೆ ಎನ್ನುವುದು ನಮ್ಮ ಬಾವುಟದ ಕತೆಯೇ ಆಗಿದೆ. ಪ್ರಸ್ತುತ ಕಾದಂಬರಿ ‘ಜಗದ್ವಂದ್ಯ ಭಾರತಂ’ ರಾಷ್ಟ್ರಧ್ವಜದ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here