ವಿದ್ಯಾರ್ಥಿಗಳೇ ತಂಬಾಕು ವ್ಯಸನದಿಂದ ದೂರವಿರಿ

0
45

ಕಾರವಾರ,ಆ.24- ಜಿಲ್ಲಾ ತಂಬಾಕು ನಿಯಂತ್ರಣ ಕೇಂದ್ರ , ಸರಕಾರಿ ವೈದ್ಯಕೀಯ ಕಾಲೇಜ್, ಶಿವಾಜಿ ಕಲಾ, ವಾಣಿಜ್ಯ ಮತ್ತು ಬಿ.ಸಿ.ಎ ಮಹಾವಿದ್ಯಾಲಯ ಬಾಡ, ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 23/08/2019ರಂದು “ತಂಬಾಕು ನಿಷೇಧ ಜಾಗೃತಿ” ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಗಾರಕ್ಕೆ ಅತಿಥಿ ಉಪನ್ಯಾಸಕರಾಗಿ ಸರಕಾರಿ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಹೇಮಗಿರಿ, ಸಹಪ್ರಾದ್ಯಾಪಕರಾದ ಡಾ. ಗೀರಿಶ, ಡಾ. ಮಾಲತೇಶ ಹಾಗೂ ಡಾ. ಪ್ರಶಾಂತ ಉಪನ್ಯಾಸ ನೀಡಿದರು.

ಡಾ. ಗಿರೀಶ ಅವರು ತಮ್ಮ ಉಪನ್ಯಾಸದಲ್ಲಿ ‘ವಿದ್ಯಾರ್ಥಿಗಳೇ ತಂಬಾಕು ವ್ಯಸನದಿಂದ ದೂರವಿರಿ’, ತಂಬಾಕು ವ್ಯಸನಕ್ಕೆ ಬಲಿಯಾದವರು, ಅದನ್ನು ಕಡಿಮೆ ಮಾಡುತ್ತ ಬಿಟ್ಟು ಬಿಡಿ ಎಂದು ಹೇಳಿದರು. ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಂದ ಪ್ರಶ್ನಾವಳಿಗಳ ಮೂಲಕ ಉತ್ತರವನ್ನು ಪಡೆದರು.

ಈ ಕಾರ್ಯಕ್ರಮದ ಪ್ರಯೋಜನವನ್ನು ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳು ಪಡೆದರು.

ಈ ಕಾರ್ಯಕ್ರಮದ ಮೊದಲಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಅನುರಾಧಾ ಎಂ. ನಾಯ್ಕ ಇವರು ಸ್ವಾಗತಿಸಿದರು. ಸ್ವಾಗತ ಗೀತೆಯನ್ನು ಕು. ಸ್ವಾತಿ ನಾಯ್ಕ ಹಾಡಿದರು. ಪ್ರೋ. ಅನಿತಾ ತಿಳವಿ ಇವರು ಸರ್ವರನ್ನು ವಂದಿಸಿದರು. ಕು. ವಿಭಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here