ಗದಗ್

ವಿಜ್ಞಾನ ಹುಡುಗಾಟವಲ್ಲ ಹುಡುಕಾಟ-ಡಾ.ಅನಂತ

ಗದಗ,ಆ.24- ವಿಜ್ಞಾನದಲ್ಲಿ ವಿಶ್ವಕ್ಕೆ ಅದ್ಭುತವಾದ ಕೊಡುಗೆ ನೀಡಿರುವ ಭಾರತೀಯರು ಸಂಶೋಧನೆಯಲ್ಲಿ ಸದಾ ತೊಡಗಿಸಿಕೊಂಡಿದ್ದರಿಂದ ವಿಜ್ಞಾನ ವಿಷಯವು ವಿಶೇಷ ಜ್ಞಾನದೊಂದಿಗೆ ಹುಡುಕಾಟದ ವಿಷಯವಾಗಿದ್ದರಿಂದ ವಿಜ್ಞಾನದ ವಿಷಯಕ್ಕೆ ಹುಡುಗಾಟ ಮಾಡುವಂತಿಲ್ಲ ಎಂದು ಪತ್ರಕರ್ತ ಡಾ.ಅನಂತ ಎಸ್.ಕಾರ್ಕಳ ಅಭಿಪ್ರಾಯಪಟ್ಟರು.

ಅವರು ಹುಲಕೋಟಿಯ ಶ್ರೀ ರಾಜೇಶ್ವರಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾಲ ಅಂತರ್ ಶಾಲಾ ಸಾಂಸ್ಕøತಿಕ ಹಾಗೂ ವಿಜ್ಞಾನ ಮೇಳ ಸ್ಪರ್ಧೆ-2019-2020ನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶದ ಸಂಸ್ಕøತಿ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿಯ ಸಾಧನೆಯನ್ನು ಅವಲೋಕಿಸಿ ಮುಂದಿನ ಸಾಧನೆಗೆ ಅಣಿಯಾಗುವಂತಹ ಇಂತಹ ಮೇಳಗಳು ಮಕ್ಕಳಿಗೆ ಸಹಕಾರಿಯಾಗಿವೆಯಲ್ಲದೆ ಇಂತಹ ಮೇಳಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿಯ ಪ್ರತಿಭೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲು ಸಾಧ್ಯವಾಗುತ್ತದೆ ಎಂದರು.

ಪಾಶ್ಚಾತ್ಯ ದೇಶಗಳ ಸಂಸ್ಕøತಿಗೆ ಮಾರು ಹೋಗುತ್ತಿರುವ ಇಂದಿನ ಅಧುನಿಕ ಯುಗದಲ್ಲಿ ದೇಶಿಯ ಸಂಸ್ಕøತಿಯನ್ನು ಬಿಂಬಿಸುವಂತಹ ಕಾರ್ಯ ಚಟುವಟಿಕೆಗಳನ್ನು ಇಂತಹ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಸಾಂಸ್ಕøತಿಕ ಲೋಕವನ್ನು ವಿದ್ಯಾರ್ಥಿಗಳಿ ಪರಿಚಯಿಸುವುದರೊಂದಿಗೆ ಅವರನ್ನು ಮೇಳಗಳಲ್ಲಿ ಪಾಲುದಾರರನ್ನಾಗಿ ಮಾಡಿ ಅವರಿಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವೆಂದರು.

ದೇಶದ ಸಂಸ್ಕøತಿಯ ಹಿರಿ ಗರಿಮೆಯೊಂದಿಗೆ ಭಾರತೀಯ ವಿಜ್ಞಾನಿಗಳನ್ನು ಪರಿಚಯಿಸಿ, ಅವರ ಸಾಧನೆ ಸಂಶೋಧನೆಗಳನ್ನು ತಿಳಿಯಪಡಿಸಲು, ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೆಚ್ಚಿಸಲು ಅವಿಷ್ಕಾರ, ಹೊಸತನ ಹುಡುಕಾಟದ ಮನೋಭಾವನೆ ಬೆಳೆಸಲು ಅಂತರ್ ಶಾಲಾ ವಿಜ್ಞಾನ ಮೇಳ ಮತ್ತು ಸ್ಪರ್ಧೆ ಹಮ್ಮಿಕೊಂಡು ಮಕ್ಕಳ ಪ್ರತಿಭೆಗೆ ವಿಜ್ಞಾನ, ವೈಜ್ಞಾನಿಕ ಮನೋಭಾವನೆಗೆ ಉತ್ತೇಜನ ನೀಡುವಲ್ಲಿ ಸಹಕಾರಿಯಾಗಿರುವ ವಿಜ್ಞಾನಮೇಳದ ಆಯೋಜನೆಯು ವಿಜ್ಞಾನ-ವೈಜ್ಞಾನಿಕ ಚಿಂತನೆಗಳಿಗೆ ಸ್ಪೂರ್ತಿಯಾಗಿದೆ ಎಂದರು.

ಈ ಮೇಳದಲ್ಲಿ ಮಾತನಾಡಿದ ಹುಲಕೋಟಿ ಶ್ರೀ ರಾಜೇಶ್ವರಿ ವಿದ್ಯಾನಿಕೇತನ ಶಾಲಾ ನಿರ್ವಹಣಾ ಮಂಡಳಿಯ ಉಪಾಧ್ಯಕ್ಷರಾದ ಡಿ.ಬಿ.ಓದುಗೌಡರ ವಿದ್ಯಾರ್ಥಿಗಳಲ್ಲಿಯ ಸಾಂಸ್ಕøತಿಕ ಮತ್ತು ವೈಜ್ಞಾನಿಕ, ವಿಜ್ಞಾನದ ಅಭಿರುಚಿಯನ್ನು ಹೆಚ್ಚಿಸಲು ಇಂತಹ ಮೇಳಗಳು ಹೆಚ್ಚು ಮಹತ್ವ ಪಡೆದಿವೆ ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಈ ಮೇಳಗಳು ಸ್ಪರ್ಧಾಮನೋಭಾವನೆ ಬೆಳೆಸುವ ಜೊತೆಗೆ ಶಿಸ್ತುಬದ್ಧ ಜೀವನ ನಡೆಸಲು ಮಾರ್ಗದರ್ಶಿಯಾಗಿವೆ ಎಂದರು.

ವೇದಿಕೆ ಮೇಲೆ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಇಂಜಿನೀಯರ ಬಿ.ಎ.ಬ್ಯಾಳಿ, ಶ್ರೀ ರಾಜೇಶ್ವರಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಾಘವೇಂದ್ರ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ಬಿ.ಆರ್.ಮಂಗಳಾ ಉಪಸ್ಥಿತರಿದ್ದರು. ಕುಮಾರಿ ಸೃಷ್ಠಿ ಹಿರೇಮಠ ಸಂಗಡಿಗರಿಂದ ಪ್ರಾರ್ಥನೆ ನೃತ್ಯ ಮೂಡಿಬಂದಿತು. ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ, ಶ್ರೀಮತಿ ಸಿ.ವಿ.ಹೆಬಸೂರ ಮೇಳದ ಕುರಿತು ಮಾತನಾಡಿದರು.ಕುಮಾರಿ ಚೈತ್ರಾ ಮಾಳಗಿ ಹಾಗೂ ಕುಮಾರ ಶೀತಲ ವಜ್ರಂಗಿ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಸಿದ್ದು ಹೊಸೂರು ವಂದಿಸಿದರು.

ಮೇಳದ ಉದ್ಘಾಟನೆ ನಂತರ ಸುಮಾರು 20ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನೀಯರಿಂದ ನಡೆದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮ ಮನಮೋಹಕವಾಗಿದ್ದವು.

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: