ಸಜ್ಜನರ ಸಂಗವು ಹೆಜ್ಜೇನು ಸವಿದಂತೆ

0
2628

ಬಂಡಿಗಣಿ: ಸಜ್ಜನರ ಸಂಗವು ಹೆಜ್ಜೇನು ಸವಿದಂತೆ, ದುಷ್ಟರ ಸಂಗ ಬಿಟ್ಟು ಒಳ್ಳೆಯವರ ಸಂಗ ಮಾಡಿದರೆ ಜೀವನದಲ್ಲಿ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.
ಜಮಖಂಡಿ ನಗರದ ನಂದಿಕೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ವತಿಯಿಂದ ಪಾರಮಾರ್ಥಿಕ ಸಪ್ತಾಹ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ನಂದಿಕೇಶ್ವರ ಎಂಬ ಹೆಸರು ಜಮಖಂಡಿಯ ನಂದೇಶ್ವರ ಗುಡಿಯಲ್ಲಿ ಮಾತ್ರ ಇರುತ್ತದೆ. ಬೇರೆ ಯಾವ ನಂದೇಶ್ವರ ಗುಡಿಯಲ್ಲಿ ಇರುವುದಿಲ್ಲ. ನಂದಿಕೇಶವ ಎಂದರೆ ಸಾಕ್ಷಾತ್ ಶಿವನ ವಾಹನ. ಭೂಮಿಗೆ ಹೆಪ್ಪುಕೊಟ್ಟ ನಂದೇಶನೇ. ಕೇಶವ ಎಂದರೆ ಪಾಲನೇ ಮಾಡುವ ವೆಂಕಟೇಶನೇ ಈ ಸ್ಥಳದಲ್ಲಿ ಜಾಗೃತವಾಗಿದ್ದು ಇಲ್ಲಿ ಎಷ್ಟೋ ಜನ ಕಂಟಿ, ಕವಡಿ, ಮುಳ್ಳು ಇದ್ದಾಗಲೂ ಗುರುದೇವ ರಾನಡೆ, ಗಿರಮಲ್ಲೇಶ್ವರ ಮಹಾರಾಜರು, ಭಾವುಸಾಬ ಮಹಾರಾಜರು ತಮ್ಮ ಏಕಾಗ್ರತೆಯಲ್ಲಿ ಜ್ಞಾನ ಸಂಪಾದನೆ ಗಳಿಸಿದ ಸ್ಥಳವಿದು ಎಂದರು.
ಜೈ ಜಮಖಂಡಿ ಪತ್ರಿಕೆಯ ಸಂಪಾದಕ ಮಲ್ಲಿಕಾರ್ಜುನ ಮಠ ಅವರು, ಶ್ರೇಷ್ಠ ಗುರುವಿಗೆ ಮಾತ್ರ ಶ್ರೇಷ್ಠ ಶಿಷ್ಯಂದಿರುತ್ತಾರೆ. ಇದು ನನಗೆ ಒಂದು ವರ್ಷದ ಹಿಂದೆ ಜಮಖಂಡಿಯ ರಾಮತೀರ್ಥದ ಬಂಡಿಗಣಿ ಮಠದ ಶ್ರೀ ರಾಮೇಶ್ವರ ಸಪ್ತಾಹ ಕಾರ್ಯಕ್ರಮದಲ್ಲಿ ಚಕ್ರವರ್ತಿ ದಾನೇಶ್ವರ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಆಶೀವರ್ಚನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ರಭಸವಾಗಿ ಮಳೆ ಸುರಿಯಲು ಪ್ರಾರಂಭಿಸಿತು. ಆ ಸಂದರ್ಭದಲ್ಲಿ ಯಾವೊಬ್ಬ ಭಕ್ತರು ವಿಚಲಿತಗೊಳ್ಳದೇ ಮಳೆಯ ನೀರು ಅವರ ಕೆಳಗೆ ಬಿದ್ದು ಹರಿದು ಹೋದರು ಕೂಡಾ ಅವರಿಗೆ ಪರಿಜ್ಞಾನವಿರಲಿಲ್ಲ. ಅವರ ಲಕ್ಷ ಕೇವಲ ಶ್ರೀಗಳ ಆಶೀವರ್ಚನ ಕೇಳಲು ಹಂಬಲಿಸುತಿದ್ದುದನ್ನು ನಾನು ಕಣ್ಣಾರೆ ಕಂಡು ದಿಗ್ಭ್ರಾಂತನಾದೆನು ಎಂದರು.
ಜಮಖಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಯವರು ಮಾತನಾಡಿ, ಶ್ರಾವಣ ಮಾಸದ ಈ ಸಂದರ್ಭದಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯನ್ನು ಬೆಳೆಸಲು ಮಾಡುತ್ತಿರುವ ಬಂಡಿಗಣಿಮಠದ ಶ್ರೀ ದಾನೇಶ್ವರ ಶ್ರೀಗಳ ಈ ಕಾರ್ಯ ಬಹಳ ಶ್ಲಾಘನೀಯ. ಶ್ರೀ ದಾನೇಶ್ವರರನ್ನು ಪ್ರತಿಬಾರಿ ಭೇಟಿಯಾಗಿ ಅವರ ದರ್ಶನ ಪಡೆದಾಗ ನನ್ನ ಮನಸ್ಸಿಗೆ ಎನೋ ಒಂದು ತರಹದ ಆನಂದ ಹಾಗೂ ನೆಮ್ಮದಿ, ಶಾಂತಿ ಉಂಟಾಗುತ್ತದೆ ಎಂದರು.
ಶ್ರೀ ಸಿದ್ಲಿಂಗಯ್ಯಾ ಕಂಬಿ ಸ್ವಾಮಿಗಳು ಮಾತನಾಡಿದರು.
ಸುಮಂಗಲಾತಾಯಿ ಪಾಟೀಲ ನೇತೃತ್ವದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಯಿತು.

LEAVE A REPLY

Please enter your comment!
Please enter your name here