Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಅನೈತಿಕ ಸಂಬಂಧ : ಎರಡು ಮಕ್ಕಳ ತಾಯಿ ಜತೆ ವ್ಯಕ್ತಿಯ ಆತ್ಮಹತ್ಯೆ 


ಬೆಳಗಾವಿ : ಕಬ್ಬಿನದ ಹೊಲದಲ್ಲಿ ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ. ಕಂಕಣವಾಡಿಯ ಮಂಜುಳಾ ಮುತ್ತನಗೌಡ ಪಾಟೀಲ (33) ಹಾಗೂ ಉಮೇಶ ಶಿವಪ್ಪ ಹಣಮನೇರ (23) ಎಂದು ತಿಳಿದುಬಂದಿದೆ.

ಅಕ್ಟೋಬರ‌ 6ರಂದು ಮನೆಯಿಂದ ಹೋದ ಇಬ್ಬರೂ ವಾಪಸ್ಸು ಬಂದಿರಲಿಲ್ಲ. ನಿನ್ನೆ ಸಂಜೆ ರೈತರೊಬ್ಬರ ಕಬ್ಬಿನ ಹೊಲದಲ್ಲಿ ಶವಗಳು ದೊರೆತಿದ್ದು, ಕೊಳೆತ ವಾಸನೆ ಬಂದಿತು. ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಉಮೇಶ ಹಾಗೂ ಮಂಜುಳಾ ಇಬ್ಬರಿಗೂ ಬೇರೆ ಬೇರೆ ಕಡೆ ಮದುವೆಯಾದ ಬಳಿಕವೂ ಪ್ರೇಮ ಸಂಬಂಧವಿತ್ತು. ಮಂಜುಳಾಗೆ ಪುತ್ರಿ (13) ಹಾಗೂ ಪುತ್ರ (9) ಇದ್ದಾರೆ. ಉಮೇಶನಿಗೂ ಕಳೆದ ವರ್ಷ ಮದುವೆಯಾಗಿದ್ದು, ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ.

ಟಂಟಂ ಓಡಿಸುತ್ತಿದ್ದ ಉಮೇಶ ಹಾಗೂ ಮಂಜುಳಾ ನಡುವೆ ಕೆಲ ವರ್ಷಗಳಿಂದ ಸಲುಗೆ ಬೆಳೆದಿತ್ತು. ಈ ವಿಷಯ ಎರಡೂ ಮನೆಯವರಿಗೆ ಗೊತ್ತಾಗಿ, ಬುದ್ಧಿಮಾತು ಹೇಳಿದ್ದರು. ಇದರಿಂದ ಸಂಬಂಧ ಬಯಲಾಯಿತು ಎಂದು ಮನನೊಂದು ಇಬ್ಬರೂ ಜೊತೆಗೂಡಿ ಮನೆ ಬಿಟ್ಟು ಹೋಗಿದ್ದರು.

ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ವಿಷ ಕುಡಿದು ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧದ ಕಾರಣ ನಡೆದ ಜೋಡಿ ಆತ್ಮಹತ್ಯೆ ಎಂಬ ಸಂಶಯ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


A B Dharwadkar
the authorA B Dharwadkar

Leave a Reply