ಬೈಲಹೊಂಗಲ : ಮೂರು ವರ್ಷದ ಮಗುವನ್ನು ಒಲೆಯಲ್ಲಿರುವ ಕಟ್ಟಿಗೆಯಿಂದ ತಲೆ, ಕೈ, ಎದೆಗೆ ಮನಬಂದಂತೆ ಹೊಡೆದು ಕೊಂದಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕುಡಿದ ಅಮಲಿನಲ್ಲಿ ತಂದೆ ಮತ್ತು ಆತನ ಗೆಳೆಯರು ಸೇರಿ ಮೂರು ವರ್ಷದ ಗಂಡು ಮಗುವನ್ನು ಕೊಲೆ ಮಾಡಿದ್ದಾರೆ.
ಬಿಹಾರ ಮೂಲದ ಕಾರ್ತಿಕ ಮುಕೇಶ ಮಾಜಿ (3) ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಗಂಡ-ಹೆಂಡತಿ ನಡುವೆ ವೈಮನಸ್ಸಿದ್ದು ತಾಯಿ ಅಡುಗೆ ಮಾಡುವಾಗ ಒಲೆಯಲ್ಲಿರುವ ಬೆಂಕಿಯ ಕಟ್ಟಿಗೆಯನ್ನು ತೆಗೆದುಕೊಂಡು ಬಾಲಕನ ತಲೆಗೆ, ಬೆನ್ನಿಗೆ, ಕೈಗಳಿಗೆ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ. ವೀರಯ್ಯ ಹಿರೇಮಠ, ನೇಸರಗಿ ಸಿಪಿಐ ಗಜಾನನ ನಾಯ್ಕ, ಪಿ ಎಸ್ ಐ ವಾಹಿದ ಯಾದವಾಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.