Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ರಾಜ್ಯೋತ್ಸವದಂದು ಪ್ರದರ್ಶನವಾಗಲಿದೆ 10,000 ಅಡಿಯ ಕನ್ನಡ ಬಾವುಟ 


ಬೆಳಗಾವಿ : ಬೆಳಗಾವಿಯಲ್ಲಿ ಆಚರಿಸುವ ಕನ್ನಡ ರಾಜ್ಯೋತ್ಸವ ರಾಜ್ಯದ ಯಾವ ಭಾಗಗಳಲ್ಲೂ ಆಚರಿಸುವದಿಲ್ಲ. ಬೆಳಗಾವಿ ನಗರದ ವಿವಿಧ ಭಾಗಗಳಿಂದ ಆಗಮಿಸುವ ಕನ್ನಡಿಗರು ಕಿತ್ತೂರು ರಾಣಿ ಚನ್ನಮ್ಮ ವೃತದಲ್ಲಿ ಸೇರಿ ಸಂಭ್ರಮ ಪಡುವದನ್ನು ನೋಡುವುದೇ ಹಬ್ಬ.

ಕೊರೋನಾ ಸೊಂಕಿನ ಎರಡು ವರ್ಷದ ಹೊರತು ಪಡಿಸಿ, ನಗರ ಪೊಲೀಸ್ ಇಲಾಖೆ ಬಳಿಯಿರುವ ದಾಖಲೆ ಪ್ರಕಾರ ಕಳೆದ ಹತ್ತು ವರುಷದ ಆಚರಣೆಯಲ್ಲಿ ಪ್ರತಿ ರಾಜ್ಯೋತ್ಸವಕ್ಕೆ ಸುಮಾರು ಎರಡು ಲಕ್ಷ ಜನ ಚನ್ನಮ್ಮ ವೃತ್ತದಲ್ಲಿ ಸೇರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕಳೆದ ವರ್ಷ ಕನ್ನಡ ನಟ ಪುನೀತ ರಾಜಕುಮಾರ ಅಗಲಿಕೆಯಿಂದ ರಾಜ್ಯೋತ್ಸವ ಆಚರಣೆಯಿಂದ ಸ್ವಯಂ ದೂರವಿದ್ದ ಕನ್ನಡಿಗರು ಈ ಭಾರಿ ಅದ್ಧೂರಿಯಿಂದ ಆಚರಿಸಲು ನಿರ್ಧಾರಿಸಿದ್ದು, ಬೆಂಗಳೂರಿನ ಕನ್ನಡ ಮನಸ್ಸುಗಳು ಸಂಘಟನೆ 10,000 ಅಡಿ ಉದ್ದದ್ದ ಕನ್ನಡ ಬಾವುಟದ ಬಟ್ಟೆಯನ್ನು ಮೆರವಣಿಗೆಯಲ್ಲಿ ಬಳಸಲಾಗುವುದು.

ಸುಮಾರು 3 ಕೀಲೋ ಮೀಟರ್ ಹರಡಿಕೊಳ್ಳುವ ಈ ವಸ್ತ್ರವನ್ನು 2,500 ಜನ ಎರಡೂ ಬದಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಣಿ ಚನ್ನಮ್ಮ ವೃತ್ತದ ಸುತ್ತಲೂ ನಾಲ್ಕೂ ರಸ್ತೆಗಳಲ್ಲಿ ಧ್ವಜ ಪ್ರದರ್ಶನ ಮಾಡಲಾಗುತ್ತದೆ.

ಈ ಕುರಿತು ಸಮದರ್ಶಿಯೊಂದಿಗೆ ಮಾತನಾಡಿದ ಕನ್ನಡ ಮನಸ್ಸುಗಳು ಸಂಘದ ಪ್ರವೀಣ ಧರೆಗುಂದಿ ಅವರು, ನೂರಕ್ಕೂ ಹೆಚ್ಚು ಕಾರ್ಯಕರ್ತರು ಹಲವು ತಿಂಗಳಲ್ಲಿ ಈ ಧ್ವಜದ ಬಟ್ಟೆಯನ್ನು ಸಿದ್ದ ಪಡಿಸಿದ್ದಾರೆ.

ಸುಮಾರು 7,000 ಅಡಿ ವಿಸ್ತಾರದ ಧ್ವಜದ ಬಟ್ಟೆಯನ್ನು 2017 ರಲ್ಲಿ ಬೆಂಗಳೂರಿನಲ್ಲಿನ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು.

ಇದೇ ಬಟ್ಟೆ 3,000 ಅಡಿ ಬಟ್ಟೆಯಲ್ಲಿ ಬಳಸಿ ಈಗ ಸಿದ್ದ ಮಾಡಲಾಗಿದ್ದು, ಬೆಳಗಾವಿಯ ರಾಜ್ಯೋತ್ಸವದಲ್ಲಿ ಬಳಸಲಾಗುವದು ಎಂದು ತಿಳಿಸಿದ ಪ್ರವೀಣ, 10,000 ಅಡಿ ಹತ್ತಿಯಿಂದ ತಯಾರಿಸಿದ ಧ್ವಜದ ಬಟ್ಟೆಗೆ 2.5 ಲಕ್ಷ ರೂಪಾಯಿ ವೆಚ್ಚವಾಗಿದೆ. ಸಂಘಟನೆಯ ನೂರಕ್ಕೂ ಹೆಚ್ಚು ಸದಸ್ಯರು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಈ ಧ್ವಜವನ್ನು ಪ್ರದರ್ಶಿಸುವ ಮೂಲಕ ರಾಜ್ಯೋತ್ಸವಕ್ಕೆ ಮೆರಗು ತುಂಬಲಿದ್ದಾರೆ ಎಂದು ತಿಳಿಸಿದರು.

ಗಡಿಯಲ್ಲಿ ತಪಾಸಣೆ 

ಯಾವುದೇ ಸ್ಥಿತಿಯಲ್ಲಿ ನಾವು ಬೆಳಗಾವಿಯ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ. ತಾಕತ್ತಿದ್ದಾರೆ ತಡೆಯಿರಿ ಎಂದು ಕರ್ನಾಟಕಕ್ಕೆ ಸವಾಲೆಸೆದಿರುವ ಮಹಾರಾಷ್ಟ್ರದ ಶಿವಸೇನೆಯ ಕಾರ್ಯಕರ್ತರು ಬೆಳಗಾವಿ ಪ್ರವೇಶಿಸದಂತೆ ಗಡಿಯಲ್ಲಿ ತೀವ್ರ ತಪಾಸಣೆ ನಡೆದಿದೆ.

ಪುಣೆ-ಬೆಂಗಳೂರು ರಾಷ್ಟ್ರ ಹೆದ್ದಾರಿ ನಿಪ್ಪಾಣಿ ಬಳಿ ಕೊಗನೊಳ್ಳಿ ಚೆಕ್ ಪಾಯಿಂಟ್, ಉಚಗಾವಿ ಬಳಿ ಮಹಾರಾಷ್ಟ್ರದ ಗಡಿ ಶಿನ್ನೊಳ್ಳಿ ಬಳಿ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸಲಿರುವ ಪ್ರತಿಯೊಂದು ರಸ್ತೆಯಲ್ಲಿ ಬರುವ ಪ್ರತಿ ವಾಹನವನ್ನು ತಡೆದು ಪರೀಕ್ಷಿಸಲಾಗುತ್ತಿದೆ.


A B Dharwadkar
the authorA B Dharwadkar

Leave a Reply